Asianet Suvarna News Asianet Suvarna News

ಶಾಸಕನ ವಿರುದ್ಧ ರೇಪ್‌ ಆರೋಪ ಮಾಡಿದ್ದಾಕೆ ಕಾರು ಅಪಘಾತ, ಸ್ಥಿತಿ ಗಂಭೀರ!

ಬಿಜೆಪಿ ಶಾಸಕ ವಿರುದ್ಧ ರೇಪ್‌ ಆರೋಪ ಮಾಡಿದ್ದಾಕೆ ಕಾರು ಅಪಘಾತ, ಸ್ಥಿತಿ ಗಂಭೀರ| ಸಂತ್ರಸ್ತೆಯ ತಾಯಿ ಮತ್ತು ವಕೀಲ ಸ್ಥಳದಲ್ಲೇ ಸಾವು

Unnao woman who accused BJP MLA of raping her hit by truck 2 relatives dead
Author
Bangalore, First Published Jul 29, 2019, 8:13 AM IST
  • Facebook
  • Twitter
  • Whatsapp

ಉನ್ನಾವೋ[ಜು.29]: ಉತ್ತರ ಪ್ರದೇಶದ ರಾಯ್‌ಬರೇಲಿ ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್‌ ಸೆಂಗಾರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಅಪ್ರಾಪ್ತ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂತ್ರಸ್ತೆಯ ತಾಯಿ ಮತ್ತು ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಕಾರಿನಲ್ಲಿ ರಾಯ್‌ಬರೇಲಿ ಜೈಲಲ್ಲಿರುವ ಸಂಬಂಧಿ ಭೇಟಿಗಾಗಿ ತೆರಳುತ್ತಿದ್ದರು. ಆಗ ಈ ದುರ್ಘಟನೆ ಸಂಭವಿಸಿದೆ.

2017ರಲ್ಲಿ ತನ್ನ ಮೇಲೆ ಬಿಜೆಪಿ ಶಾಸಕ ಲೈಂಗಿಕ ದೌರ್ಜನ್ಯವೆಸಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಬಾಲಕಿ ಕುಟುಂಬ ಸಿಎಂ ಯೋಗಿ ಆದಿತ್ಯನಾಥ್‌ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿತ್ತು.

Follow Us:
Download App:
  • android
  • ios