Asianet Suvarna News Asianet Suvarna News

2 ಸಾವಿರ ರುಪಾಯಿ ಆಸೆ ತೋರಿಸಿ ಯುವಕನಿಗೆ ಸಂತಾನಹರಣ ಮಾಡಿಸಿದ ಆಶಾ ಕಾರ್ಯಕರ್ತೆ..!

ಈ ಶಸ್ತ್ರ ಚಿಕಿತ್ಸೆ ಪರಿಣಾಮ 5 ವರ್ಷ ಮಾತ್ರ ಎಂಬ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರ ಸುಳ್ಳು ಮಾಹಿತಿ ಆಧರಿಸಿ ಯುವಕ ಈ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾನೆ ಎನ್ನಲಾಗಿದೆ. ಇದೀಗ ವಿಷಯ ಅರಿವಾದ ಬಳಿಕ ಯುವಕ, ಆಕೆ ವಿರುದ್ಧ ದೂರು ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ. ಜೊತೆಗೆ ಘಟನೆ ಕುರಿತು ಆರೋಗ್ಯ ಇಲಾಖೆಗೆ ತನಿಖೆಗೂ ಆದೇಶಿಸಿದೆ.

Unmarried man tricked to undergo vasectomy

ಗುವಾಹಟಿ(ಡಿ.11): ಬಡತನದಿಂದ ಕಂಗೆಟ್ಟಿದ್ದ 24 ವರ್ಷದ ಅವಿವಾಹಿತ ಯುವಕನೋರ್ವ 2 ಸಾವಿರ ರುಪಾಯಿ ಹಣದ ಆಸೆಗಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಆಘಾತಕಾರಿ ಘಟನೆ ಅಸ್ಸಾಂ ದಿಬ್ರುಗಢ ಜಿಲ್ಲೆಯಲ್ಲಿ ನಡೆದಿದೆ.

ಈ ಶಸ್ತ್ರ ಚಿಕಿತ್ಸೆ ಪರಿಣಾಮ 5 ವರ್ಷ ಮಾತ್ರ ಎಂಬ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರ ಸುಳ್ಳು ಮಾಹಿತಿ ಆಧರಿಸಿ ಯುವಕ ಈ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾನೆ ಎನ್ನಲಾಗಿದೆ. ಇದೀಗ ವಿಷಯ ಅರಿವಾದ ಬಳಿಕ ಯುವಕ, ಆಕೆ ವಿರುದ್ಧ ದೂರು ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ. ಜೊತೆಗೆ ಘಟನೆ ಕುರಿತು ಆರೋಗ್ಯ ಇಲಾಖೆಗೆ ತನಿಖೆಗೂ ಆದೇಶಿಸಿದೆ.

ಕಮೀಷನ್‌'ಗೆ ಬಲಿ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡವರಿಗೆ ಸರ್ಕಾರ 2000 ರುಪಾಯಿ ನೆರವು ನೀಡುತ್ತದೆ. ಜೊತೆಗೆ ಹೀಗೆ ಶಸ್ತ್ರಚಿಕಿತ್ಸೆಗೆ ಮನವೊಲಿಸಿದ ಆಶಾ ಕಾರ್ಯಕರ್ತರಿಗೆ 200 ರುಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೀಗಾಗಿ ಪೊಮಿಳಾ ಎಂಬ ಆಶಾ ಕಾರ್ಯಕರ್ತೆ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಜನರನ್ನು ಪುಸಲಾಯಿಸುತ್ತಿದ್ದಳು. ಒಟ್ಟು 7 ಮಂದಿ ಸಂತ್ರಸ್ತರು ಈ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದಾರೆ.

Follow Us:
Download App:
  • android
  • ios