'ಕತ್ತೆ...' ಎಂದು ಬಯ್ಯುತ್ತೇವೆ, ಬಯ್ಯಿಸಿಕೊಂಡಿರುತ್ತೇವೆ. ಆದರೆ, ಈ ಕತ್ತೆಗೂ ಮನಸ್ಸಿದೆ. ಹಲವಾರು ವಿಶೇಷತೆಗಳಿರುತ್ತವೆ. ಜ್ಞಾಪಕ ಶಕ್ತಿಯೂ ಹೆಚ್ಚು. ಇನ್ನೇನಿವೆ ಇದರ ವಿಶೇಷತೆ.

ಕತ್ತೆ ಮರಿ ನೋಡಲು ಮುದ್ದು. ಮಕ್ಕಳು ತಪ್ಪು ಮಾಡಿದಾಗಲೂ 'ಕತ್ತೆ...' ಎಂದು ಬಯ್ಯುತ್ತೇವೆ. ಆದರೆ, ಕತ್ತೆಯೊಂದು ಶ್ರಮಜೀವಿ ಪ್ರಾಣಿ ಎಂಬುವುದ ಅರಿತರೆ ಎಲ್ಲರಿಗೂ ಇದರ ಮಹತ್ವ ಅರ್ಥವಾಗುತ್ತೆ. ಅಷ್ಟೇ ಅಲ್ಲ ಇದರ ಜ್ಞಾಪಕ ಶಕ್ತಿಯೂ ಅದ್ಭುತವಾದದ್ದು. 25 ವರ್ಷಗಳ ಹಿಂದೆ ಭೇಟಿಯಾದವರನ್ನೂ ನೆನಪಿನಲ್ಲಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಈ ಕತ್ತೆಗಿದೆ. 

ಮರುಭೂಮಿಯಲ್ಲಿ ಹುಟ್ಟಿ ಬೆಳೆದ ಈ ಪ್ರಾಣಿ ಬಗ್ಗೆ ಇನ್ನೊಂದಿಷ್ಟು ಅರಿಯಿರಿ....

  • ಸರಿಯಾಗಿ ಸಾಕಿದರೆ 40 ವರ್ಷ ಬದುಕುತ್ತದೆ. 
  • ಒಂದು ಕತ್ತೆ ಮತ್ತೊಂದು ಕತ್ತೆಯ ಕೂಗನ್ನು 60 ಮೈಲಿ ದೂರದಿಂದಲೂ ಕೇಳಿಸಿಕೊಳ್ಳುವ ಶಕ್ತಿ ಹೊಂದಿರುತ್ತದೆ. ಅದಕ್ಕೆ ಅದರ ದೊಡ್ಡ ಕಿವಿಗಳು ಕಾರಣ.
  • ಪ್ರಯಾಣ ಮಾಡುವಾಗ ಯಾವುದಾದರೂ ತೊಂದರೆ ಎದುರಾಗುವುದಿದ್ದರೆ, ಮುನ್ನವೇ ಸೂಚನೆ ನೀಡುತ್ತದೆ. ಅಂಥ ಸಂದರ್ಭದಲ್ಲಿ ಕಾಲುಗಳನ್ನು ನೆಲಕ್ಕೆ ಕುಟ್ಟುತ್ತದೆ. ಆದರೆ ಹಲವರು ಇದನ್ನು ಮೊಂಡುತನವೆಂದೇ ಭಾವಿಸುತ್ತಾರೆ.
  • ತೆಳ್ಳನೆ ಚರ್ಮ ಹೊಂದಿರುವ ಕತ್ತೆಗೆ ಮಳೆಯಲ್ಲಿ ನೆನೆಯುವುದೆಂದರೆ ಆಗೋಲ್ಲ. 
  • ಶೇ.95 ಸೇವಿಸಿದ ಆಹಾರವನ್ನು ಜೀರ್ಣಿಸಿಕೊಂಡು, ಶಕ್ತಿಯನ್ನಾಗಿ ಪರಿವರ್ತಿಸುವ ಗುಣ ಕತ್ತೆಗಿದೆ. ಇದಕ್ಕೆ ಇದು ಮರುಭೂಮಿಯಲ್ಲಿಯೇ ಹುಟ್ಟಿದ್ದು ಕಾರಣ. 
  • ಕುದುರೆ ಹೆಣ್ಣು ಮರಿ ಮತ್ತು ಕತ್ತೆಯ ಗಂಡು ಮರಿಯನ್ನು ಮ್ಯೂಲ್ ಎಂದು ಕರೆಯಲಾಗುತ್ತದೆ.
  • ಗರ್ಭಿಣಿ ಕತ್ತೆಯು 365 ದಿನಗಳ ನಂತರ ಮರಿ ಹಾಕುತ್ತದೆ. ಒಂದು ಸಲಕ್ಕೆ ಒಂದೇ ಮರಿ ಹಾಕುತ್ತದೆ. 
  • ಇಡೀ ವಿಶ್ವದಲ್ಲಿಯೇ ಚೀನಾ ಹೆಚ್ಚು ಕತ್ತೆ ಸಂಖ್ಯೆಯನ್ನು ಹೊಂದಿದೆ.