ನಿರುದ್ಯೋಗಿಗಳಿಗೆ ಶಾಕ್! ವಿವಿ ನೌಕರರ ಸೇವಾ ಅವಧಿ ಹೆಚ್ಚಳ

First Published 28, Mar 2018, 9:16 AM IST
University Staff Service Term increase
Highlights

ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಶಾಕ್ !  ಕೊನೆ ಕ್ಷಣದಲ್ಲಿ ಸರ್ಕಾರ ವಿಶ್ವವಿದ್ಯಾಲಯಗಳ ನೌಕರರ ಸೇವಾ ಅವಧಿಯನ್ನು  ಹೆಚ್ಚಳ ಮಾಡುವಂತೆ ಆದೇಶ ನೀಡಿದೆ. 

ಬೆಂಗಳೂರು (ಮಾ. 28): ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಶಾಕ್ !  ಸರ್ಕಾರ ವಿಶ್ವವಿದ್ಯಾಲಯಗಳ ನೌಕರರ ಸೇವಾ ಅವಧಿಯನ್ನು  ಹೆಚ್ಚಳ ಮಾಡುವಂತೆ ಆದೇಶ ನೀಡಿದೆ. 
ವಿವಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಇದು ಅನ್ವಯವಾಗಲಿದೆ.  ಸೇವಾ ಅವಧಿ ಹೆಚ್ಚಳದ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದೆ.  ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿವಿಗಳ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. 

ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭೋಧಕ ಸಿಬ್ಬಂದಿಗಳಿಗೆ 60 ರಿಂದ 62 ವರ್ಷಕ್ಕೆ ಹೆಚ್ಚಿಸಲು ಆದೇಶ ನೀಡಲಾಗಿದೆ.  ಸಿಬ್ಬಂದಿ ಹಾಗೂ ಉಪನ್ಯಾಸಕರಿಗೆ 62 ರಿಂದ 65 ವರ್ಷಕ್ಕೆ ಹೆಚ್ಚಳ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ.  
ಸೇವಾ ಅವಧಿ ಹೆಚ್ಚಳದ ಬಗ್ಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಉನ್ನತ ಶಿಕ್ಷಣ ಇಲಾಖೆ  ಇದೇ 23 ರಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಂದ ಆದೇಶ ನೀಡಲಾಗಿದೆ. 

loader