ಈ  ಕುರಿತು ವಿವಿ ಉಪಕುಲಪತಿ ಪರೀಕ್ಷಾ ಹಾಗೂ ಹಿಂದಿ ವಿಭಾಗಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿಗಳಿಸಿದ್ದಾರೆನ್ನಲಾಗಿದೆ. ಪರೀಕ್ಷೆಯ ಹೊಸ ದಿನಾಂಕಗಳನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.

ಪಾಟ್ನಾ (ಏ.14): ವಿವಿಯೊಂದು ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಲು ಮರೆತು ಹೋಗಿರುವ ಪರಿಣಾಮವಾಗಿ ಪರೀಕ್ಷೆಯೇ ರದ್ದಾಗಿರುವ ವಿದ್ಯಮಾನ ಬಿಹಾರದಲ್ಲಿ ನಡೆದಿದೆ.

ತಿಲ್ಕಾ ಮಾಂಜ್ಹಿ ಭಾಗಲ್ಪುರ ಎಂಬ ವಿವಿಯ ಎಡವಟ್ಟಿನಿಂದಾಗಿ ಹಿಂದಿ ಸ್ನಾತಕೋತ್ತರ ವಿಭಾಗದ 94 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯದೇ ವಾಪಾಸುಹೋಗಬೇಕಾಯಿತು.

ಈ ಕುರಿತು ವಿವಿ ಉಪಕುಲಪತಿ ಪರೀಕ್ಷಾ ಹಾಗೂ ಹಿಂದಿ ವಿಭಾಗಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿಗಳಿಸಿದ್ದಾರೆನ್ನಲಾಗಿದೆ. ಪರೀಕ್ಷೆಯ ಹೊಸ ದಿನಾಂಕಗಳನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.

ವಿಷಯಗಳ ಆಯ್ಕೆಗಾಗಿ ಪರಿಚಯಿಸಲಾಗಿರುವ ಹೊಸ ವ್ಯವಸ್ಥೆಯಿಂದಾಗಿ ಈ ಲೋಪವಾಗಿದೆಯೆಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡುತ್ತಿದ್ದಾರೆ ಎನ್ನಲಾಗಿದೆ.