ಕೆಲವರು ಅವರ ಕುಟುಂಬಗಳಿಗೆ ಮಾತ್ರವೇ ಅನುಕೂಲವನ್ನು ಮಾಡಿಕೊಳ್ಳುತ್ತಾರೆ.  ಪ್ರಧಾನಿ ಪ್ರಧಾನಿಗೆ ಜನ್ಮ ನೀಡುತ್ತಾರೆ.  ಮುಖ್ಯಮಂತ್ರಿ ಮುಖ್ಯಮಂತ್ರಿಗೆ ಜನ್ಮ ನೀಡುತ್ತಾರೆ. ಆದರೆ ಇದನ್ನು ಬಿಜೆಪಿ ಬದಲಾಯಿಸಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 

ನವದೆಹಲಿ : ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಕುಟುಂಬ ರಾಜಕಾರಣ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಶ್ರೀಮಂತ ದೇಶವನ್ನು ಬಡ ಜನಸಂಖ್ಯೆಯನ್ನು ಹೊಂದಿದವರು. ಕೆಲವರು ಅವರ ಕುಟುಂಬಗಳಿಗೆ ಮಾತ್ರವೇ ಅನುಕೂಲವನ್ನು ಮಾಡಿಕೊಳ್ಳುತ್ತಾರೆ. ಪ್ರಧಾನಿ ಪ್ರಧಾನಿಗೆ ಜನ್ಮ ನೀಡುತ್ತಾರೆ. ಮುಖ್ಯಮಂತ್ರಿ ಮುಖ್ಯಮಂತ್ರಿಗೆ ಜನ್ಮ ನೀಡುತ್ತಾರೆ. 

ಇದರಿಂದ ಪ್ರಜಾಪ್ರಭುತ್ವ ಎನ್ನುವುದೇ ಮುಚ್ಚಿ ಹೋಗಿದೆ. ಆದರೆ ಇದನ್ನು ಬಿಜೆಪಿ ಬದಲಾಯಿಸಿದೆ ಎಂದು ವಾಕ್ ಪ್ರಹಾರ ನಡೆಸಿದ್ದಾರೆ.

ಅಲ್ಲದೇ ಬಿಜೆಪಿ ಓರ್ವ ವ್ಯಕ್ತಿಯ ಹೆಸರಿನಲ್ಲಿ ಎಂದಿಗೂ ನಡೆಯುತ್ತಿಲ್ಲ. ಇದು ಒಂದು ಕುಟುಂಬದ ಪಕ್ಷವಲ್ಲ. ಒಂದು ಜಾತಿ, ಒಂದು ಧರ್ಮ, ಭಾಷೆ ಸೀಮಿತವಾಗಿಲ್ಲ. ನಮ್ಮ ಪಕ್ಷ ಎಂದಿಗೂ ಯಾವ ವ್ಯಕ್ತಿಯಿಂದ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.