ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು (ನಾಲಿಕೆ ಕೀಡೆ) ಗಟಾರದು ಹುಳುವಿಗೆ ಹೋಲಿಸುವ ಮೂಲಕ ಕೇಂದ್ರ ಸಚಿವರು ವಿವಾದ ಸೃಷ್ಟಿಸಿದ್ದಾರೆ.
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು (ನಾಲಿಕೆ ಕೀಡೆ) ಗಟಾರದು ಹುಳುವಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬಿಹಾರದ ಸಸಾರಾಮ್‌ನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ, ‘ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶ ಇದ್ದಂತೆ.
ಆದರೆ, ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಗಟಾರದಲ್ಲಿರುವ ಕೀಟ ಇದ್ದಂತೆ’ ಎಂದು ಹೇಳಿದ್ದಾರೆ. ವಿವಾದಿತ ಹೇಳಿಕೆಯಿಂದಲೇ ಗುರುತಿಸಿಕೊಂಡಿರುವ ಚೌಬೆ, ಕಳೆದ ತಿಂಗಳು ರಾಹುಲ್ ಗಾಂಧಿ ಅವರೊಬ್ಬ ಹಲವು ಮುಖಗಳನ್ನು ಹೊಂದಿರುವ ‘ಛದ್ಮವೇಷಧಾರಿ’. ಪಕ್ಷವನ್ನು ಅವರು ಮುಗಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
