ನವದೆಹಲಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ವರ್ತನೆಯಿಂದ ಜಗತ್ತಿನ ಮುಂದೆ ಭಾರತದ ರಾಜ ಕಾರಣಿಗಳ ಗೌರವಕ್ಕೆ ಧಕ್ಕೆಯಾಗಿದೆ ಎಂದು ಎಂದು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್‌ರನ್ನು ಭೇಟಿ ಯಾಗಿ ಸಮಾಲೋಚಿಸಿದ್ದೇನೆ ಎಂದು ಸೃಷ್ಟಿಸಿದ ಕಥೆ ಹೇಳುವ ಮೂಲಕ ತಮ್ಮ ನಂಬಿಕೆಗೆ ತಾವೇ ಚ್ಯುತಿ ತಂದಿದ್ದಾರೆ. ಇದು ಇತರೆ ಭಾರತೀಯರ ಇಮೇಜ್‌ಗೂ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಮೋದಿ-ರಾಹುಲ್‌ರನ್ನು ಫ್ರಾನ್ಸ್, ಕ್ರೊವೇಷಿಯಾಗೆ ಹೋಲಿಸಿದ ಶಿವಸೇನೆ

ಸಂಸತ್ತಿನಲ್ಲಿ ಶುಕ್ರವಾರ ನಡೆದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವಿನ ಚರ್ಚೆಯನ್ನು ಶಿವಸೇನೆ ಫಿಫಾ ವಲ್ಡ್ ಕಪ್ ಫೈನಲ್‌ಗೆ ಹೋಲಿಸಿದೆ. ಅವಿಶ್ವಾಸ ಗೊತ್ತುವಳಿಯಲ್ಲಿ ಪ್ರಧಾನಿ ಮೋದಿಯವರು ಫ್ರಾನ್ಸ್ ರೀತಿ ಗೆದ್ದಿರುವಂತೆ ಭಾಸವಾಗುತ್ತಾರೆ, ಆದರೆ ರಾಹುಲ್ ಗಾಂಧಿ ರನ್ನರ್ -ಅಪ್ ಕ್ರೊವೇಷಿಯಾ ರೀತಿ ಹಲವಾರು ಮಂದಿಯ ಹೃದಯ ಗೆದ್ದಿದ್ದಾರೆ ಎಂದು ಶಿವಸೇನೆ ಬಣ್ಣಿಸಿದೆ.