ಸಂಸದ ಅನಂತ್ ಕುಮಾರ್ ಹೆಗಡೆ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ  ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಖಾತೆ ಸಚಿವರಾಗಿ  ಸ್ಥಾನ ಪಡೆದ ನಂತರ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ.   

ಬೆಂಗಳೂರು (ಸೆ.09): ಸಂಸದ ಅನಂತ್ ಕುಮಾರ್ ಹೆಗಡೆ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಖಾತೆ ಸಚಿವರಾಗಿ ಸ್ಥಾನ ಪಡೆದ ನಂತರ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿಗೆಭೇಟಿನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಕಾರ್ಯಕರ್ತರು ಹೂವಿನ ಬೊಕ್ಕೆ ನೀಡಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಅನಂತ್ ಕುಮಾರ್'ರವರನ್ನು ಸ್ವಾಗತಿಸಲು ರಾಜ್ಯ ಬಿಜೆಪಿ ಪ್ರಮುಖ ಬಿಜೆಪಿ ನಾಯಕರು ಬರಲೇ ಇಲ್ಲ.ಪ್ರಮುಖ ಶಾಸಕ ಡಾ.ಸಿ.ಎನ್. ಆಶ್ವತ್ಥ್ ನಾರಾಯಣ್ ಮಾತ್ರ ಸ್ವಾಗತಿಸಿದರು.

ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಹಿಂದುತ್ವ ವಾದಿಯಲ್ಲ, ರಾಷ್ಟ್ರೀಯ ವಾದಿ. ನನ್ನನ್ನು ಕೇಂದ್ರ ಸಚಿವ ಸಂಪುಟಕ್ಕೆ ಆಯ್ಕೆ ಮಾಡಿದ್ದರ ಹಿಂದಿನ‌ ರಹಸ್ಯ ಪ್ರಧಾನಿ‌ ಮೋದಿ ಹಾಗೂ ಬಿಜೆಪಿ ವರಿಷ್ಠರಿಗೆ ಮಾತ್ರ ಗೊತ್ತು. ನಾನು ಎಂದೂ ರಾಜ್ಯ ರಾಜಕೀಯಕ್ಕೆ ಬರುವ ಕನಸು ಕಂಡವನಲ್ಲ, ಕನಸುಗಾರನೂ ಅಲ್ಲ ಎಂದು ಹೇಳಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ನಕ್ಸಲ್ ಕುರಿತಾದ ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪಕ್ಷದ ಮೇಲಿನ ನಿಷ್ಠೆ ಇಲ್ಲಿಯವರೆಗೆ ತಂದಿದೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ಬಿಜೆಪಿ ಮಾತ್ರ. ಎಲ್ಲರ ಪ್ರೀತಿ, ವಿಶ್ವಾಸ ನನ್ನನ್ನು ಇಲ್ಲಿಗೆ ಕರೆ ತಂದಿದೆ. ರಾಜಕಾರಣ ಎಂದರೆ ಜಾತಿ, ಹಣ ಅಲ್ಲ. ನಯಾ ಪೈಸೆ ಖರ್ಚು ಮಾಡದೇ ಐದು ಬಾರಿ ಸಂಸದನಾಗಿದ್ದೇನೆ. ತಲೆ ತಗ್ಗಿಸುವ ಕೆಲಸವನ್ನ ನಾನೆಂದೂ ಮಾಡಲ್ಲ. ಕೆಲವು ಆರೋಪಗಳು ನನ್ನ ಮೇಲೆ ಬಂದಿವೆ. ಹಣಕ್ಕಾಗಿ ಅಕ್ಷರ ಮಾರುವ ಉದ್ಯೋಗ ಅವಲಂಬಿಸಿದವರಿಗೆ ಮಾತ್ರ ನನ್ನ ಆರೋಪ ಕಂಡಿದೆ. ಆಕಾಶದಿಂದ ಅವಕಾಶಗಳು ಉದುರುವುದಿಲ್ಲ. ನಮ್ಮ ಪರಿಶ್ರಮದಿಂದಲೇ ಪಡೆಯಬೇಕಿದೆ. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ಮಾತನಾಡುತ್ತೇವೆ. ಅನಕ್ಷರಸ್ಥರನ್ನು ಗುರುತಿಸಿ ಅವರ ಕೌಶಲ್ಯಕ್ಕೆ ನಾವು ಡಿಗ್ರಿಯನ್ನ ನೀಡುತ್ತೇವೆ. ಕೌಶಲ್ಯವಿರುವವರನ್ನು ಗುರುತಿಸಿ ತರಬೇತಿ ನೀಡುತ್ತೇವೆ. ಅವರಿಗೆ ಸಮಾಜದಲ್ಲಿ ಸ್ಥಾನಮಾನ ನೀಡುತ್ತೇವೆ" ಎಂದರು