ಬೆಂಗಳೂರು: ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡರಿಗೆ ಶಹಾಬ್ಬಾಸ್ ಎಂದಿದ್ದಾರೆ.  ಯಾಕಂತೀರಾ? ಬೆಂಗಳೂರಿನಲ್ಲಿ ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಇಂದು ಚಾಲನೆ ನೀಡಲಾಗಿದೆ. ಸಿರಿಧಾನ್ಯ ಬೆಳೆಯುವ ಹಾಗೂ ಬಳಸುವ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ನಿಟ್ಟಿನಲ್ಲಿ ಕೃಷಿ ಸಚಿವ ವಿಶೇಷ ಮುತುರ್ಜಿಯೊಂದಿಗೆ ಈ ಮೇಳವನ್ನು ಆಯೋಜಿಸಿದ್ದಾರೆ. ಸಿರಿಧಾನ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಕೂಡಾ ಭಾಗವಹಿಸಿದ್ದರು. ಐಟಿ/ಬಿಟಿ/ ಏರೋಸ್ಪೇಸ್ ರಾಜಧಾನಿಯಾಗಿರುವ ಬೆಂಗಳೂರು ಗ ಸಿರಿಧಾನ್ಯ ರಾಜಧಾನಿಯೂ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಅನಂತ್ ಕುಮಾರ್, ಈ ಯೋಜನೆಯನ್ನು ಹಮ್ಮಿಕೊಂಡಿರುವ ಕೃಷ್ಣ ಬೈರೇಗೌಡಗೆ ಶಹಾಬ್ಬಾಸ್ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಆರಂಭವಾಗಿರುವ ಸಿರಿಧಾನ್ಯ ಮೇಳವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರದವೆರೆಗೆ ನಡೆಯಲಿದೆ.