Asianet Suvarna News Asianet Suvarna News

ಎಸ್‌ಸ್ಸಿ-ಎಸ್ಟಿ ಕಾಯ್ದೆಗಳ ಮೂಲ ನಿಬಂಧನೆಗಳಿಗೆ ಕೇಂದ್ರ ಅಸ್ತು?

‘ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಯನ್ನು ಇದ್ದ ಸ್ವರೂಪದಲ್ಲೇ ಮಂಡಿಸಲು ಕೇಂದ್ರ ಸರಕಾರ ತೀರ್ಮಾನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆ ಈ ತೀರ್ಮಾನಕ್ಕೆ ಬಂದಿದ್ದು ಈ ಬಾರಿಯ ಅಧಿವೇಶನದಲ್ಲಿಯೇ ಬಿಲ್ ಪಾಸ್ ಆಗಲಿದೆ.

Union Govt to introduce Bill to reinstate provisions in SC/ST Act during this session of Parliament
Author
Bengaluru, First Published Aug 1, 2018, 9:11 PM IST

ನವದೆಹಲಿ(ಆ 1) ಕೇಂದ್ರ ಸಚಿವ ಸಂಪುಟವು ದಲಿತ ದೌರ್ಜನ್ಯ ತಡೆ ಕಾಯ್ದೆ(1989)ಯ ಯಥಾಸ್ಥಿತಿಯಲ್ಲಿಯೇ ಮುಂದುವರಿಸಲು ತೀರ್ಮಾನ ಮಾಡಿದೆ.

ಜಾತಿ ನಿಂದನೆ ಪ್ರಕರಣದ ದೂರು ದಾಖಲಾದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಆತನನ್ನು ಪೊಲೀಸ್ ಕಸ್ಟಡಿಗೆ ವಹಿಸಬೇಕು ಎಂಬ ವಿಚಾರಗಳು ಒಂದು ಕಡೆ ಇದ್ದರೆ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ವಾದ ಮತ್ತೊಂದು ಕಡೆಯಿಂದ ಇತ್ತು.  ಆದರೆ ಕೇಂದ್ರ ಸರಕಾರ ಯಥಾ ಸ್ಥಿತಿ ಎಂದು ಹೇಳಿದ್ದು ಸಂಸತ್ತಿನಲ್ಲಿ ಇನ್ನೊಂದು ಸುತ್ತಿನ ಚರ್ಚೆ ನಡೆಯಲಿದೆ

‘ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ –1989 ಅನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆ’ ಎಂದು ದಲಿತ ಸಂಘಟನೆಗಳು ಆರೋಪಿಸಿದರು. ದಲಿತರ ಆಕ್ರೋಶದಿಂದ ಎಚ್ಚೆತ್ತ ಕೇಂದ್ರ ಸರ್ಕಾರ, ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Follow Us:
Download App:
  • android
  • ios