ನವದೆಹಲಿ[ಜೂ. 18]  ಡಜನ್ ಗೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿದ್ದ ಕೇಂದ್ರ ಸರಕಾರ ಇದೀಗ ಕಂದಾಯ ಇಲಾಖೆಯ 15 ಹಿರಿಯ ಅಧಿಕಾರಿಕಾರಿಗಳನ್ನು ವಜಾ ಮಾಡಿದೆ.

ಲಂಚ ಕೇಳಿದ ಆರೋಪ ಬಂದ ಅಧಿಕಾರಿಗಳನ್ನು ಕೇಂದ್ರ ಸರಕಾರ ವಜಾ ಮಾಡಿದೆ. ಕೇಂದ್ರ ದಹಣಕಾಸು ಇಲಾಖೆ ಮೂಲಗಳು ಹೇಳಿರುವಂತೆ ಕೆಲಸ ಕಳೆದುಕೊಂಡ ಅಧಿಕಾರಿಗಳು ಮುಖ್ಯ ಆಯುಕ್ತ ಮತ್ತು ಆಯುಕ್ತ ಗ್ರೇಡ್  ಅಧಿಕಾರಿಗಳು.

ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದ ಎರಡನೇ ಪ್ರಮುಖ ಸ್ವಚ್ಛತಾ ಕಾರ್ಯ ಇದಾಗಿದೆ. ದೆಹಲಿ ಅಡಿಟ್ ವಿಭಾಗದ ಪ್ರಿಸಿಪಲ್ ಎಡಿಜಿ ಅನುಪ್ ಶ್ರೀವತ್ಸವ,  ಅತುಲ್ ದೀಕ್ಷಿತ್, ಜಿ.ಶ್ರೀಹರ್ಷ, ಮುಂಬೈ ಜಿಎಸ್ ಟಿ ವಿಭಾಗದ ಆಯುಕ್ತ ವಿನೋದ್ ಕೆಆರ್ ಸಂಘ, ಎಸ್ ಎಸ್ .ಬಿಶಿತ್, ಅಮರೇಶ್ ಜೈನ್ ಅವರಿಗೆ ಕಡ್ಡಾಯವಾಗಿ ನಿವೃತ್ತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.