ಕೆಲಸ ಕಳೆದುಕೊಂಡವರ ಮೇಲೂ ಬಜೆಟ್‌ನಲ್ಲಿ ಹೊಸ ತೆರಿಗೆ ಹೇರಿಕೆ!

Union Govt Impose New Tax
Highlights

ತೆರಿಗೆ ಪಾವತಿದಾರರ ಜಾಲ ವಿಸ್ತರಿಸಲು ಪ್ರತಿ ವರ್ಷ ನಾನಾ ಮಾರ್ಗ ಹುಡುಕುತ್ತಲೇ ಇರುವ ಕೇಂದ್ರ ಸರ್ಕಾರ, ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕೆಲಸ ಕಳೆದುಕೊಂಡವರ ಮೇಲೂ ತೆರಿಗೆ ಹಾಕುವ ಹೊಸ ಅಂಶ ಸೇರಿಸಿರುವುದು ಬೆಳಕಿಗೆ ಬಂದಿದೆ.

ಮುಂಬೈ: ತೆರಿಗೆ ಪಾವತಿದಾರರ ಜಾಲ ವಿಸ್ತರಿಸಲು ಪ್ರತಿ ವರ್ಷ ನಾನಾ ಮಾರ್ಗ ಹುಡುಕುತ್ತಲೇ ಇರುವ ಕೇಂದ್ರ ಸರ್ಕಾರ, ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕೆಲಸ ಕಳೆದುಕೊಂಡವರ ಮೇಲೂ ತೆರಿಗೆ ಹಾಕುವ ಹೊಸ ಅಂಶ ಸೇರಿಸಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ತಂತ್ರಜ್ಞಾನ ಸೇರಿದಂತೆ ಕೆಲವು ವಲಯಗಳಲ್ಲಿ ಉದ್ಯೋಗಿಗಳನ್ನು ಯಾವುದೋ ಕಾರಣದಿಂದ ಕೆಲಸದಿಂದ ತೆಗೆದುಹಾಕಿದ ಬಳಿಕ ಅವರಿಗೆ ಒಮ್ಮೆಲೆ ಪರಿಹಾರದ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಇದುವರೆಗೂ ಈ ಹಣವನ್ನು ವೇತನೇತರ ಅಥವಾ ಲಾಬೇತರ ವಿಷಯ ಎಂದು ಪರಿಗಣಿಸಲಾಗುತ್ತಿತ್ತು.

ಜೊತೆಗೆ ಉದ್ಯೋಗಿಯೊಬ್ಬ ಯಾವುದೇ ತೆರಿಗೆ ಪಾವತಿ ಮಾಡಬೇಕಿರಲಿಲ್ಲ. ಆದರೆ ಇತ್ತೀಚಿನ ಬಜೆಟ್‌ನಲ್ಲಿ ಹೀಗೆ ಉದ್ಯೋಗಿಯೊಬ್ಬ ಪಡೆದ ಹಣವನ್ನೂ ಇತರೆ ಆದಾಯ ಎಂದು ಪರಿಗಣಿಸಿ ಅದಕ್ಕೆ ತೆರಿಗೆ ಹಾಕುವ ಪ್ರಸ್ತಾಪ ಮಾಡಲಾಗಿದೆ.

loader