ನವದೆಹಲಿ(ಜು.14): ಹಲವು ಪ್ರಥಮಗಳನ್ನು ಸ್ಥಾಪಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಎತ್ತಿದ ಕೈ. ನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಮೋದಿ ಸರ್ಕಾರ ಸದಾ ಸಿದ್ಧ.

ಅದರಂತೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಾಗರಿಕರು ಹೇಗೆ ಕಾಲಹರಣ ಮಾಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಳಕೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಸಮಯ ಬಳಕೆ ಸಮೀಕ್ಷೆಗೆ ಮುಂದಾಗಿರುವ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ, 2019ರ ಜನವರಿಯಿಂದಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಶ್ರೀವಾತ್ಸವ್, ಮುಂದಿನ ಡಿಸೆಂಬರ್ ವರೆಗೂ ಒಟ್ಟು ನಾಲ್ಕು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸ್ವಯಂಸೇವಾ ಕಾರ್ಯಗಳು, ಮನೆಗೆಲಸ ಮತ್ತು ಮನೆಗೆಲಸದ ಸೇವೆಗಳಂತಹ ವೇತನ ರಹಿತ ಕೆಲಸಗಳಲ್ಲಿ ಜನತೆ ಎಷ್ಟು ಸಮಯ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಮೊದಲ ಸಮೀಕ್ಷೆ ಇದಾಗಲಿದೆ. 

ಸಾಂಖ್ಯಿಕ ಸಚಿವಾಲಯ ಸಚಿವಾಲಯ ಕೈಗೊಂಡಿರುವ ಸಮೀಕ್ಷೆಯನ್ನು ಎರಡು ವಿಭಾಗಗಳಲ್ಲಿ- ಪಾವತಿ ಮತ್ತು ಪಾವತಿ ರಹಿತ ಚಟುವಟಿಕೆ- ಎಂಬ ವರ್ಗೀಕರಣದ ಅಡಿಯಲ್ಲಿ ನಡೆಸಲಾಗುತ್ತಿದೆ. 

ದೇಶಾದ್ಯಂತ ಕಾಲಹರಣದ ಸಮೀಕ್ಷೆ ನಡೆಯುತ್ತಿರುವುದು ಇದೇ ಮೊದಲು. ಜನತೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಈ ಸಮೀಕ್ಷೆ ವಿಶ್ಲೇಷಣೆ ನಡೆಸಲಿದೆ.