ರಫೆಲ್ ಒಪ್ಪಂದದ ಸುಪ್ರೀಂ ತೀರ್ಪಿಗೆ ಸಿಕ್ತು ಟ್ವಿಸ್ಟ್| ತೀರ್ಪಿನಲ್ಲಿ ಲೋಪವಿದೆ ಎಂದ ಕೇಂದ್ರ ಸರ್ಕಾರ| ಲೋಪ ಸರಿಪಡಿಸಿಕೊಳ್ಳಲು ಸುಪ್ರೀಂಗೆ ಕೇಂದ್ರದ ಮನವಿ| ಸಿಎಜಿ ವರದಿ ಮತ್ತು ಪಿಎಸಿ ಪರಿಶೀಲನೆ ಉಲ್ಲೇಖದಲ್ಲಿ ಲೋಪ         

ನವದೆಹಲಿ(ಡಿ.15): ರಫೆಲ್ ಒಪ್ಪಂದದ ಕುರಿತು ತನಿಖೆ ನಡೆಸಬೇಕಾದ ಅವಶ್ಯಕತೆ ಇಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ.

ಈ ಮಧ್ಯೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಲೋಪದೋಷವಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಖುದ್ದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯವನ್ನು ಕೇಳಿದೆ.

ಹೌದು, ಸುಪ್ರೀಂ ತೀರ್ಪಿನಲ್ಲಿ ರಫೆಲ್ ಯುದ್ಧ ವಿಮಾನದ ಬೆಲೆ ಕುರಿತಂತೆ ಸಿಎಜಿ ವರದಿ ಮತ್ತು ಆ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಪರಿಶೀಲಿಸಿದ ಕುರಿತು ಉಲ್ಲೇಖವಿದೆ.

Scroll to load tweet…

ಆದರೆ ಇದುವರೆಗೂ ಸಿಎಜಿ ರಫೆಲ್ ಯುದ್ಧ ವಿಮಾನದ ಬೆಲೆ ಕುರಿತು ವರದಿ ಸಿದ್ಧಪಡಿಸಿಲ್ಲ ಮತ್ತು ಅದನ್ನು ಪಿಎಸಿ ಪರಿಶೀಲನೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಿಎಜಿ ಹಾಗೂ ಪಿಎಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾಗಿದೆ ಎಂಬುದನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಕಾನೂನು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಸದ್ಯ ತೀರ್ಪಿನಲ್ಲಿ ಸಿಎಜಿ ವರದಿ ಕುರಿತು ತಪ್ಪು ಗ್ರಹಿಕೆ ಇದ್ದು, ಇದನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.

ರಫೇಲ್ ಡೀಲ್ ತೀರ್ಪು: ಮೋದಿಗೆ ಜಯ, ರಾಹುಲ್‌ಗೆ ಮುಖಭಂಗ!

ಮೋದಿ ‘ಚೋರ್ ಹೇ’ ಅಂದಿದ್ದ ರಾಹುಲ್: ರಫೆಲ್ ದಾಳ ಫೇಲ್!

ಏನು ನಿಮ್ಮ SOURCE?: ಶಾ ಪ್ರಶ್ನೆಗೆ ರಾಹುಲ್ ಮಾಡ್ತಾರಾ ANSWER?

ಮೋದಿ-ಅಂಬಾನಿ ಕಳ್ಳರೆಂದು ಸಾಬೀತುಪಡಿಸಿಯೇ ಸಿದ್ದ: ರಾಹುಲ್!

ಮೋದಿಗೆ ಚಿದಂಬರಂ ರಫೆಲ್ ಪ್ರಶ್ನೆ: ಸ್ಕ್ವಾಡರ್ನ್ ಬೇಡಿಕೆ ಎಷ್ಟು?