ತ್ರಿವಳಿ ತಲಾಖ್ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ  ಇಂದು ಅಂಗೀಕಾರ ಮಾಡಿದೆ. ತ್ರಿವಳಿ ತಲಾಖ್ ನೀಡುವುದು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ (ಡಿ.15): ತ್ರಿವಳಿ ತಲಾಖ್ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಇಂದು ಅಂಗೀಕಾರ ಮಾಡಿದೆ . ತ್ರಿವಳಿ ತಲಾಖ್ ನೀಡುವುದು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟಪಡಿಸಿದೆ.

ತ್ರಿವಳಿ ತಲಾಖ್ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಬಹುದು. ಕ್ರಿಮಿನಲ್​​ ಪ್ರಕರಣದಡಿ ಬಂಧಿಸಿ ವಿಚಾರಣೆ ನಡೆಸಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಮೌಖಿಕ, ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಟ್ರಿಪಲ್ ತಲಾಕ್ ನೀಡುವುದು ನಿಷೇಧ ಎಂದು ಹೇಳಿದೆ.

ವಿವಾದ ಗ್ರಾಸವಾಗಿರುವ ತ್ರಿವಳಿ ತಲಾಖ್'ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್’ನ ಐವರು ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್ ವಿಚ್ಛೇದನದ ‘ಕೆಟ್ಟ ಹಾಗೂ ಅನಪೇಕ್ಷಿತ ‘ ರೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.