ರದ್ದು ಹಾಗೂ ತಿದ್ದುಪಡಿ ಮಸೂದೆ-2017ನ್ನು ಸಂಸತ್ತಿನಲ್ಲಿ ಪರಿಚಯಿಸುವ ಮೂಲಕ ಬಳಕೆಯಲ್ಲಿಲ್ಲದ ಹಾಗೂ ಅನಗತ್ಯವಾಗಿರುವ 105 ಕಾನುನುಗಳನ್ನು ಹಿಂಪಡೆಯಲು ಸಚಿವ ಸಂಪುಟವು ತೀರ್ಮಾನಿಸಿದೆ.

ನವದೆಹಲಿ (ಜ.18): ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ಅಪ್ರಸ್ತುತ ಹಾಗೂ ಅನಗತ್ಯ ಕಾನೂನಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ರದ್ದು ಹಾಗೂ ತಿದ್ದುಪಡಿ ಮಸೂದೆ-2017ನ್ನು ಸಂಸತ್ತಿನಲ್ಲಿ ಪರಿಚಯಿಸುವ ಮೂಲಕ ಬಳಕೆಯಲ್ಲಿಲ್ಲದ ಹಾಗೂ ಅನಗತ್ಯವಾಗಿರುವ 105 ಕಾನುನುಗಳನ್ನು ಹಿಂಪಡೆಯಲು ಸಚಿವ ಸಂಪುಟವು ತೀರ್ಮಾನಿಸಿದೆ.

ವಿವಿಧ ಸಚಿವಾಲಯ ಹಾಗೂ ಇಲಾಖೆಗಳೊಂದಿಗೆ ಕೂಲಂಕಷವಾಗಿ ಸಮಾಲೋಚಿಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈವರೆಗೆ ಸುಮಾರು 73 ಇಲಾಖೆಗಳು ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯೆ ನೀಡಿವೆ; 105 ಕಾಯ್ದೆಗಳನ್ನು ರದ್ದುಗೊಳಿಸಲು ಅವುಗಳು ಒಪ್ಪಿದರೆ, ಇತರ 139 ಕಾನೂನುಗಳನ್ನು ಹಿಂಪಡೆಯುವ ಬಗ್ಗೆ ಅಸಮ್ಮತಿ ಸೂಚಿಸಿವೆ.