ಕೇಂದ್ರ ಬಜೆಟ್: ರಾಜ್ಯಕ್ಕೆ ನಿರಾಶೆ

news | Thursday, February 1st, 2018
Suvarna Web Desk
Highlights
  • ಮೋದಿ ಸರ್ಕಾರವು ರಾಜ್ಯಕ್ಕೆ ಭರಪೂರ ಕೊಡುಗೆಗಳನ್ನು ನೀಡುತ್ತಾರೆ ಎಂದು ನಿರೀಕ್ಷಿಸಿದ್ದ ಜನ
  • ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಿರಾಶೆ 

ನವದೆಹಲಿ: ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕಕ್ಕೆ ಇಂದು ಮಂಡಿಸಲಾದ ಕೇಂದ್ರ ಬಜೆಟ್ ನಿರಾಶೆಯನ್ನುಂಟುಮಾಡಿದೆ.

ರಾಜ್ಯ ವಿಧಾನಸಭೆಯ ಚುನಾವಣಾ ಕಣ ರಂಗೇರುತ್ತಿರುವ ಹಿನ್ನೆಲೆಯಲ್ಲಿ, ಮೋದಿ ಸರ್ಕಾರವು ರಾಜ್ಯಕ್ಕೆ ಭರಪೂರ ಕೊಡುಗೆಗಳನ್ನು ನೀಡುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಆದರೆ ಬಜೆಟ್ ಅದೆಲ್ಲವನ್ನೂ ಹುಸಿಯಾಗಿಸಿದೆ.

ಕರ್ನಾಟಕಕ್ಕೆ ಒಂದು ಮೆಡಿಕಲ್ ಕಾಲೇಜು, ಬೆಂಗಳೂರಿಗೆ ಸಬ್ ಅರ್ಬನ್ ರೈಲು ಹಾಗೂ ಐಸ್ಯಾಕ್ ಸಂಶೋಧನಾ ಕೇಂದ್ರವನ್ನು ಬಿಟ್ಟು ಯಾವುದೇ ವಿಶೇಷವಾದ ಯೋಜನೆಗಳನ್ನು ಘೋಷಿಸಲಾಗಿಲ್ಲ.

ರೈಲ್ವೆಗೆ ರೂ 1,48, 528 ಕೋಟಿಯ ಅನುದಾನ ಘೋಷಿಸಿರುವ ಜೇಟ್ಲಿ, ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ ₹17 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಆ ರೈಲು ಮಾರ್ಗಗಳು  ಮೆಟ್ರೋ ಗೆ ಜೊಡನೆಯಾಗಲಿವೆ.

Comments 0
Add Comment