ಅಂಚೆ ನೌಕರರಿಗೆ ಇನ್ನು ಮುಂದೆ ಖಾದಿ ಸಮವಸ್ತ್ರ

Uniform For Post Office Employees
Highlights

ಮುಂಬರುವ ಫೆಬ್ರವರಿ ತಿಂಗಳಿನಿಂದ ದೇಶಾದ್ಯಂತ ಇರುವ ಸಾವಿರಾರು ಅಂಚೆ ಇಲಾಖೆ ಸಿಬ್ಬಂದಿ ಖಾದಿ, ಸಮವಸ್ತ್ರ ಧರಿಸಲಿದ್ದಾರೆ. ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಪ್ಯಾಂಟ್ ಶರ್ಟನ್ನು ಸಮವಸ್ತ್ರವಾಗಿ ವಿನ್ಯಾಸಗೊಳಿಸಲಾಗಿದೆ.

ನವದೆಹಲಿ: ಮುಂಬರುವ ಫೆಬ್ರವರಿ ತಿಂಗಳಿನಿಂದ ದೇಶಾದ್ಯಂತ ಇರುವ ಸಾವಿರಾರು ಅಂಚೆ ಇಲಾಖೆ ಸಿಬ್ಬಂದಿ ಖಾದಿ, ಸಮವಸ್ತ್ರ ಧರಿಸಲಿದ್ದಾರೆ. ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಪ್ಯಾಂಟ್ ಶರ್ಟನ್ನು ಸಮವಸ್ತ್ರವಾಗಿ ವಿನ್ಯಾಸಗೊಳಿಸಲಾಗಿದೆ.

ಖಾದಿ ಮತ್ತು ಗ್ರಾಮೀಣ ಉದ್ಯೋಗ ಆಯೋಗದಿಂದ ಅಂಚೆ ಇಲಾಖೆ ಈ ಸಮವಸ್ತ್ರ ಖರೀದಿ ಮಾಡಲಾಗಿದೆ. ದೇಶಾದ್ಯಂತ ಒಟ್ಟು 83,000 ಪೋಸ್ಟ್‌ಮ್ಯಾನ್‌ಗಳಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಉದ್ಯೋಗಿಗಳಿಗೆ ಖಾದಿ ಬಳಸಲು ಉತ್ತೇಜನ ನೀಡುತ್ತಿದೆ.

loader