ಬೆಳಗಾವಿ[ಡಿ.10]  ಸಂಪುಟ ವಿಸ್ತರಣೆಗೆ ದೋಸ್ತಿ ಸರಕಾರ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದರೆ ಅಸಮಾಧಾನಿತ ಶಾಸಕರು ಸದನಕ್ಕೆ ಚಕ್ಕರ್ ಹಾಕಿದ್ದಾರೆ.

ಕಂಪ್ಲಿ ಶಾಸಕ ಗಣೇಶ್, ಸಂಡೂರು ಶಾಸಕ ತುಕಾರಾಮ್, ವಿಜಯನಗರ ಶಾಸಕ ಆನಂದ ಸಿಂಗ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಪಕ್ಷೇತರ ಶಾಸಕ ನಾಗೇಶ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್, ಶಾಸಕ ಎಂ.ಬಿ ಪಾಟೀಲ್ ಸೇರಿದಂತೆ ಹಲವು ಅಸಮಾಧಾನಿತ ಶಾಸಕರು ಸದನಕ್ಕೆ ಬಂದಿಲ್ಲ.

ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಗೈರಾಗಿರುವುದು ಪರೋಕ್ಷವಾಗಿ ದೋಸ್ತಿ ಸರಕಾರದ ಪ್ರಮುಖ ನಾಯಕರಿಗೆ ಕಾಡಿದೆ. ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದು ಅಲ್ಲಿಂದಲೇ ಯಾವುದಾದರೂ ರಾಜಕೀಯ ದಾಳ ಉರುಳಿಸುತ್ತಾರೋ ಕಾದು ನೋಡಬೇಕಿದೆ.