ಓದು ಬರಹ ಬರುವವರು ಮಾತ್ರ ಇನ್ಮುಂದೆ ಅಕ್ಷರಸ್ಥರಲ್ಲ! ಬದಲಾಗಲಿದೆ ’ಅನಕ್ಷರಸ್ಥ’ ವ್ಯಾಖ್ಯಾನ

Uneducated Definition will change
Highlights

ಓದಲು, ಬರೆಯಲು ಬಾರದವರನ್ನು ‘ಅನಕ್ಷರಸ್ಥರು’ ಎನ್ನುವುದು  ಇದುವರೆಗೆ ಭಾರತದಲ್ಲಿ ಪಾಲಿಸಿಕೊಂಡ ಬಂದ ಪದ್ಧತಿ. ಆದರೆ, ಶೀಘ್ರದಲ್ಲೇ ‘ಅನಕ್ಷರತೆ’ಯ ವ್ಯಾಖ್ಯಾನ ಬದಲಾಗುವ ಸಾಧ್ಯತೆಯಿದೆ.

ನವದೆಹಲಿ (ಮಾ. 01): ಓದಲು, ಬರೆಯಲು ಬಾರದವರನ್ನು ‘ಅನಕ್ಷರಸ್ಥರು’ ಎನ್ನುವುದು  ಇದುವರೆಗೆ ಭಾರತದಲ್ಲಿ ಪಾಲಿಸಿಕೊಂಡ ಬಂದ ಪದ್ಧತಿ. ಆದರೆ, ಶೀಘ್ರದಲ್ಲೇ ‘ಅನಕ್ಷರತೆ’ಯ ವ್ಯಾಖ್ಯಾನ ಬದಲಾಗುವ ಸಾಧ್ಯತೆಯಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಸಂಸ್ಥೆಯಾದ ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು ನಿರ್ಧಾರ ಮಂಡಳಿ (ಟಿಐಎಫ್‌ಎಸಿ) ಸಿದ್ಧಪಡಿಸಿರುವ 2035 ರ ಶೈಕ್ಷಣಿಕ ನೀಲಿನಕಾಶೆಯ ಪ್ರಕಾರ, ವಿವಿಧ ಕ್ಷೇತ್ರಗಳ ಜನರು ತಮ್ಮ  ಕ್ಷೇತ್ರದಲ್ಲಿನ ನೈಪುಣ್ಯತೆಯ ಆಧಾರದಲ್ಲಿ ‘ಅಕ್ಷರಸ್ಥ’ರು ಯಾರೆಂಬುದನ್ನು  ಪರಿಗಣಿಸಲಾಗುತ್ತದೆ. ಈ ಚಿಂತನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ವೀಕರಿಸುವ ಸಾಧ್ಯತೆಗಳಿವೆ. ಆದರ್ಶ ಸಮಾಜದಲ್ಲಿ, ಅಕ್ಷರಸ್ಥ ವ್ಯಕ್ತಿ ಮತ್ತು ವಿದ್ಯಾವಂತ ವ್ಯಕ್ತಿಯ ನಡು ವೆ ಅಂತರವಿರಬಾರದು.  ಇದನ್ನು ಸಾಧಿಸುವುದಕ್ಕಾಗಿ, ಅಕ್ಷರಸ್ಥ ಎಂಬುದನ್ನು ಗುರುತಿಸುವ ವಿಧಾನವನ್ನು ಇನ್ನಷ್ಟು ಪರಿಶೀಲಿಸಬೇಕಾಗಿದೆ. ಅನಕ್ಷರಸ್ಥ ಎಂಬುದನ್ನು ಗುರುತಿಸುವಾಗ, ವ್ಯಕ್ತಿಯು ಓದುವ, ಬರೆಯುವ ಮತ್ತು ಲೆಕ್ಕಹಾಕುವುದಕ್ಕೆ ಬಲ್ಲನೆಂಬುದಕ್ಕೆ  ಮಾತ್ರ ಸೀಮಿತಗೊಳಿಸಬಾರದು ಎಂದು ವರದಿ ಹೇಳಿದೆ.  

loader