ಮಂಗಳನಲ್ಲಿ ಪತ್ತೆಯಾಯ್ತು ಸರೋವರ, ನೀರಿದೆಯೆ?

https://static.asianetnews.com/images/authors/b348a094-0bef-5801-a1f6-61e57071185f.jpg
First Published 26, Jul 2018, 10:52 AM IST
Underground Lake Found on Mars in Research
Highlights

ಒಂದು ಕಡೆ ಚಂದ್ರ ಗ್ರಹಣ, ಚಂದ್ರಯಾನದ ವಿಚಾರಗಳು ಚರ್ಚೆಯಲ್ಲಿದ್ದರೆ ಇನ್ನೊಂದು ಕಡೆ ವಿಜ್ಞಾನಿಗಳು ಮಂಗಳನಲ್ಲಿ ಭೂಗತ ಸರೋವರ ಇದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್[ಜು.26] ಅನ್ಯ ಗ್ರಹಗಳಲ್ಲಿ ನೀರಿದೆಯೇ? ಜೀವ ಸಂಕುಲವಿದೆಯೇ? ಎಂಬ ಅಧ್ಯಯನ ನಡೆಯುತ್ತಲೇ ಇದೆ. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ತಜ್ಞರು, ಮಂಗಳ ಗ್ರಹದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಭೂಗತ ಸರೋವರವೇ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್‌ ಎಕ್ಸ್‌ಪ್ರೆಸ್ ಆರ್ಬಿಟರ್‌ನಲ್ಲಿ ಅಳವಡಿಸಲಾಗಿದ್ದ ರಾಡಾರ್ ಉಪಕರಣದ ಮೂಲಕ ಈ ಸಂಶೋಧನೆ ನಡೆಸಲಾಗಿದೆ.ಸುಮಾರು 20 ಕಿ.ಮೀ. ವ್ಯಾಪ್ತಿಯ ಹಿಮದ ಪದರಗಳ ಅಡಿ ಯಲ್ಲಿ ಸರೋವರ ಇರುವುದನ್ನು ಇಟಾಲಿಯನ್ ಸಂಶೋಧಕರ ನೇತೃತ್ವದ ತಂಡ ಪತ್ತೆಹಚ್ಚಿದೆ.

ಇದು ಮಂಗಳನಲ್ಲಿ ಪತ್ತೆಯಾದ ಅತಿದೊಡ್ಡ ಜಲಾಶಯ. ಮಂಗಳನಲ್ಲಿ ವ್ಯಾಪಕ ನೀರಿನ ಆಶ್ರಯ ಇದೆಯೇ?, ಇಲ್ಲಿ ಹಿಂದೆ ಅಥವಾ ಪ್ರಸ್ತುತ ವಾಸಿಸುತ್ತಿರಬಹುದಾದ ಸಾಧ್ಯತೆಯ ಸಂಶೋಧನೆಗೆ ಇದು ಸಹಾಯಕವಾಗಿದೆ ಎಂದಿದ್ದಾರೆ ತಜ್ಞರು.

loader