ನಾಳೆಯಿಂದ ಅಂಡರ್ 19 ವಿಶ್ವಕಪ್ ಆರಂಭ

news | 1/12/2018 | 7:08:00 AM
sujatha A
Suvarna Web Desk
Highlights

12ನೇ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಶನಿವಾರದಿಂದ ಆರಂಭ ಗೊಳ್ಳಲಿದ್ದು, ನ್ಯೂಜಿಲೆಂಡ್ ಈ ಕಿರಿಯ ಕ್ರಿಕೆಟಿಗರ ಮಹಾಸಮರಕ್ಕೆ ವೇದಿಕೆ ಒದಗಿಸುತ್ತಿದೆ.

ನವದೆಹಲಿ(ಜ.12): 14 ಫೆಬ್ರವರಿ 2016 , ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕೊನೆ ಓವರ್‌ನಲ್ಲಿ 5 ವಿಕೆಟ್‌ಗಳ ಸೋಲು ಅನುಭವಿಸಿ ವಿಶ್ವಕಪ್ ಎತ್ತಿಹಿಡಿಯುವ ಅವಕಾಶ ಕೈಚೆಲ್ಲಿತ್ತು.

ಆ ಕಹಿ ನೆನಪು ಇನ್ನೂ ಕಾಡುತ್ತಿರುವಾಗಲೇ ಮತ್ತೊಂದು ವಿಶ್ವಕಪ್ ಬಂದಿದೆ. 12ನೇ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಶನಿವಾರದಿಂದ ಆರಂಭ ಗೊಳ್ಳಲಿದ್ದು, ನ್ಯೂಜಿಲೆಂಡ್ ಈ ಕಿರಿಯ ಕ್ರಿಕೆಟಿಗರ ಮಹಾಸಮರಕ್ಕೆ ವೇದಿಕೆ ಒದಗಿಸುತ್ತಿದೆ.

ವಿಶ್ವದ ಒಟ್ಟು 16 ರಾಷ್ಟ್ರಗಳ ತಂಡಗಳು ವಿಶ್ವಕಪ್ ಎತ್ತಿಹಿಡಿಯಲು ಪೈಪೋಟಿ ನಡೆಸಲಿವೆ. ಐಸಿಸಿ 10 ಪೂರ್ಣಾವಧಿ ಸದಸ್ಯ ರಾಷ್ಟ್ರಗಳಿಗೆ ನೇರ ಪ್ರವೇಶ ದೊರೆತರೆ, ಸಹಾಯಕ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದ್ದ ನಮೀಬಿಯಾಕ್ಕೂ ನೇರ ಪ್ರವೇಶ ನೀಡಲಾಗಿದೆ. ಉಳಿದಂತೆ ವಿವಿಧ ಅರ್ಹತಾ ಸುತ್ತು ಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿದ 5 ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿವೆ. 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.

ಅತ್ಯಂತ ಮಹತ್ವದ ಟೂರ್ನಿ: 2008 ರ ವರೆಗೂ ಅಂಡರ್- 19 ವಿಶ್ವಕಪ್ ಟೂರ್ನಿಗೆ ಹೆಚ್ಚಿನ ಮಹತ್ವವೇನೂ ಸಿಗುತ್ತಿರಲಿಲ್ಲ. ಈ ಪಂದ್ಯಾವಳಿಯಲ್ಲಿ ಆಡಿ ಮಿಂಚಿದ ಆಟಗಾರರು ಹಿರಿಯರ ತಂಡಕ್ಕೆ ಕಾಲಿಡುವ ವರೆಗೂ ಅವರ ಪರಿಚಯ ಕ್ರಿಕೆಟ್ ಜಗತ್ತಿಗೆ ಹೆಚ್ಚಾಗಿ ಇರುತ್ತಿರಲಿಲ್ಲ. ಆದರೆ 2008 ರಲ್ಲಿ ಐಪಿಎಲ್ ಹಾಗೂ ಇನ್ನಿತರ ಟಿ20 ಪಂದ್ಯಾವಳಿಗಳ ಆಗಮನ ದಿಂದ ಅಂಡರ್-19 ವಿಶ್ವಕಪ್‌ನ ಚಿತ್ರಣವೇ ಬದಲಾಯಿತು.

2008ರ ಆವೃತ್ತಿಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಪಂದ್ಯಾವಳಿಗೂ ಮುನ್ನ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಸೇರಿದಂತೆ ಅನೇಕರು, ಬೆಂಗಳೂರಲ್ಲಿ 3 ತಿಂಗಳುಗಳ ಕಾಲ ಅಭ್ಯಾಸ ಶಿಬಿರ ದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ, ಬೆಂಗಳೂರಿನ ರಸ್ತೆಗಳಲ್ಲಿ, ಹೋಟೆಲ್‌ಗಳಲ್ಲಿ ಪ್ರತಿ ದಿನ ಕಾಣಿಸಿಕೊಂಡರೂ ಯಾರೂ ಅವರನ್ನು ಗುರುತು ಹಿಡಿಯುತ್ತಿ ರಲಿಲ್ಲ. ಆದರೆ ಆ ಆವೃತ್ತಿ ಯಲ್ಲಿ ಭಾರತ ಚಾಂಪಿಯನ್ ಆದ ಬಳಿಕ ಎಲ್ಲವೂ ಬದಲಾ ಯಿತು. ಐಪಿಎಲ್, ಬಿಗ್‌ಬ್ಯಾಶ್ ಲೀಗ್‌ನಿಂದಾಗಿ ಅಂಡರ್-19 ಆಟಗಾರರು ಹಿರಿಯ ಕ್ರಿಕೆಟಿಗರಷ್ಟೇ ಜನಪ್ರಿಯತೆ ಗಿಟ್ಟಿಸುವ ಅವಕಾಶ ದೊರೆತಿದೆ.

Comments 0
Add Comment

    Sudeep Shivanna Cricket pratice

    video | 4/7/2018 | 3:47:33 PM
    Chethan Kumar
    Associate Editor