ನಾವು ಐದಾರು ಬಾರಿ ವ್ಹೀಲ್’ಚೇರ್’ಗಾಗಿ ತಲಾ 100 ರೂ. ಪಾವತಿಸದ್ದೇವೆ. ಆದರೆ ಆ ಮಧ್ಯೆ ಅದು ಕಳೆದು ಹೋಗಿದೆ.  ಹೊಸತು ಖರೀದಿಸಲು ನಮ್ಮಿಂದ ಸಾಧ್ಯವಿರಲಿಲ್ಲ. ಕಳೆದು ಹೋದ ವ್ಹೀಲ್’ಚೇರ್’ಗೆ ರೂ.6000 ಕೊಡುವಂತೆ ಹೇಳುತ್ತಿದ್ದಾರೆ, ಎಂದು ರಾಜು ಪತ್ನಿ ತಿಳಿಸಿದ್ದಾರೆ.

ಹೈದರಾಬಾದ್ (ಮಾ.17): ವ್ಹೀಲ್ ಚೇರ್’ಗಾಗಿ ದುಡ್ಡು ಕೊಡದ ಕಾರಣ ಗಾಯಾಳು ಆತನ ಮಗುವಿನ 3-ಚಕ್ರ ಸೈಕಲನ್ನು ಬಳಸುವಂತೆ ಮಾಡಿದ ಆಘಾತಕಾರಿ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

33 ವರ್ಷ ಪ್ರಾಯದ ರಾಜು ಎಂಬಾತ ಅಪಘಾತವೊಂದರಲ್ಲಿ ತಲೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು 6000 ರೂ. ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹಣ ಕೊಡಲು ಆತನಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸದೇ ಕಾಯುವಂತೆ ಮಾಡಿದ್ದಾರೆ ಎಂದು ಏಎನ್ಐ ವರದಿ ಮಾಡಿದೆ.

ನಾವು ಐದಾರು ಬಾರಿ ವ್ಹೀಲ್’ಚೇರ್’ಗಾಗಿ ತಲಾ 100 ರೂ. ಪಾವತಿಸದ್ದೇವೆ. ಆದರೆ ಆ ಮಧ್ಯೆ ಅದು ಕಳೆದು ಹೋಗಿದೆ. ಹೊಸತು ಖರೀದಿಸಲು ನಮ್ಮಿಂದ ಸಾಧ್ಯವಿರಲಿಲ್ಲ. ಕಳೆದು ಹೋದ ವ್ಹೀಲ್’ಚೇರ್’ಗೆ ರೂ.6000 ಕೊಡುವಂತೆ ಹೇಳುತ್ತಿದ್ದಾರೆ, ಎಂದು ರಾಜು ಪತ್ನಿ ತಿಳಿಸಿದ್ದಾರೆ.

ಹಣವನ್ನು ಹೊಂದಿಸುವವರೆಗೆ ನಮ್ಮ ಮೊಬೈಲ್ ಫೋನ್’ಗಳನ್ನು ಅವರ ಬಳಿ ಇಡುವಂತೆ ಹೇಳಿದ್ದಾರೆ, ಎಂದು ಆಕೆ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)