ಆ ಜಾಗದ ಮಾಲಿಕರ ಹೆಸರು ಗೌಪ್ಯವಾಗಿಡಲಾಗಿದೆ. ಆ ಜಾಗವನ್ನು ಮಂದಿರ ನಿರ್ಮಾಣಕ್ಕಾಗಿ ದಾನಮಾಡಿ, ದೇವರ ಮೆಚ್ಚುಗೆಗೆ ಪಾತ್ರವಾಗಬೇಕೆಂದು ನಾನು ಅದರ ಮಾಲಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಉಮಾ ಭಾರತಿ ಏಎನ್ಐಗೆ ಹೇಳಿದ್ದಾರೆ.
ನವದೆಹಲಿ (ಮಾ.21): ನ್ಯಾಯಲಯದ ಹೊರಗೆ ಬಾಬ್ರಿ ಮಸೀದಿ- ರಾಮ ಮಂದಿರ ವಿವಾದವನ್ನು ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸಲಹೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವೆ ಉಮಾ ಭಾರತಿ, ರಾಮಮಂದಿರ ನಿರ್ಮಾಣಕ್ಕಾಗಿ ಜಾಗವನ್ನು ದಾನಮಾಡುವಂತೆ ಅದರ ಮಾಲಿಕರಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಈ ವಿಷಯವು ಸೂಕ್ಷ್ಮ ಹಾಗೂ ಭಾವನಾತ್ಮಕವಾಗಿದೆ ಎಂದಿರುವ ಉಮಾ ಭಾರತಿ, ಸುಪ್ರೀಂ ಕೋರ್ಟ್ ಸಲಹೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಆ ಜಾಗದ ಮಾಲಿಕರ ಹೆಸರು ಗೌಪ್ಯವಾಗಿಡಲಾಗಿದೆ. ಆ ಜಾಗವನ್ನು ಮಂದಿರ ನಿರ್ಮಾಣಕ್ಕಾಗಿ ದಾನಮಾಡಿ, ದೇವರ ಮೆಚ್ಚುಗೆಗೆ ಪಾತ್ರವಾಗಬೇಕೆಂದು ನಾನು ಅದರ ಮಾಲಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಉಮಾ ಭಾರತಿ ಏಎನ್ಐಗೆ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸಲಹೆಯನ್ನು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಸ್ವಾಗತಿಸಿದ್ದಾರೆ. ಎರಡು ಕಡೆಯವರು ಲುಳಿತು ಮಾತುಕತೆ ನಡೆಸಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದ್ದಾರೆ.
80-90ರ ದಶಕದಲ್ಲಿ ರಾಮ ಜನ್ಮಭೂಮಿ ಚಳುವಳಿಯಲ್ಲಿ ಉಮಾ ಭಾರತಿ ಸಕ್ರಿಯವಾಗಿ ಭಾಗವಹಿಸಿದ್ದರು.