ಜೀರುಂಡೆಗೆ ಪರಿಸರ ಹೋರಾಟಗಾರ್ತಿ ಗ್ರೇಟಾ ಹೆಸರು | ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಗ್ರೇಟಾ, ನನ್ನ ಬಾಲ್ಯ ಕಸಿಯಲು ನಿಮಗೆಷ್ಟುಧೈರ್ಯ ಎಂದು ವಿಶ್ವ ನಾಯಕರಿಗೆ ಚಾಟಿ ಬೀಸಿ ಗಮನ ಸೆಳೆದಿದ್ದಳು.
ಸ್ವೀಡನ್ (ಅ. 27): ಹೊಸದಾಗಿ ಪತ್ತೆ ಹಚ್ಚಲಾದ ಜೀರುಂಡೆಗೆ ಅತಿ ಕಿರಿಯ ಪರಿಸರ ಹೋರಾಟಗಾರ್ತಿ ಸ್ವೀಡನ್‌ನ ಗ್ರೇಟಾ ಥನ್ಬರ್ಗ್ ಹೆಸರನ್ನು ಇಡಲಾಗಿದೆ. 1 ಮಿ.ಮೀ. ಉದ್ದವಿರುವ ಈ ಜೀರುಂಡೆ ಕಣ್ಣು, ರೆಕ್ಕೆಗಳನ್ನು ಹೊಂದಿಲ್ಲ. ಇಂತಹ ವಿಶೇಷ ಕೀಟವನ್ನು ವಿಜ್ಞಾನಿ ಡಾ.ಮೈಕೆಲ್ ಡರ್ಬಿ ಅವರು ಸಂಶೋಧಿಸಿದ್ದಾರೆ.
ಬಂಪರ್ ಸೇಲ್: ಒಂದೇ ದಿನ 600 ಬೆಂಝ್ ಕಾರು ಸೇಲ್!
ಆರಂಭದಲ್ಲಿ ಇದಕ್ಕೆ ಎನ್.ಗ್ರೇಟಿಯಾ ಎಂದು ಹೆಸರಿಸಲಾಗಿತ್ತು. ಇದರ ಗುಣವಿಶೇಷತೆ ಸಂಶೋಧನೆ ಬಳಿಕ ಅತಿ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಕುರಿತು ವಿಶ್ವಾದ್ಯಂತ ಜಾಗೃತಿ ಮೂಡಿಸುತ್ತಿರುವ ಸ್ವೀಡನ್‌ನ ಗ್ರೇಟಾ ಥನ್ಬರ್ಗ್ ಅವರ ಹೆಸರನ್ನು ವಿಜ್ಞಾನಿ ಮೈಕಲ್ ಸೂಚಿಸಿದ್ದಾರೆ.
ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಗ್ರೇಟಾ, ನನ್ನ ಬಾಲ್ಯ ಕಸಿಯಲು ನಿಮಗೆಷ್ಟುಧೈರ್ಯ ಎಂದು ವಿಶ್ವ ನಾಯಕರಿಗೆ ಚಾಟಿ ಬೀಸಿ ಗಮನ ಸೆಳೆದಿದ್ದಳು.
