ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಆದೇಶಿಸಿದ್ದ ‘ಬ್ಲೂ ಸ್ಟಾರ್‌’ ಕಾರ್ಯಾಚರಣೆಯಲ್ಲಿ ಬ್ರಿಟನ್‌ ಭಾಗಿಯಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಬಹುದು ಎನ್ನಲಾದ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಬ್ರಿಟನ್‌ ನ್ಯಾಯಾಧೀಶರೊಬ್ಬರು ಆದೇಶಿಸಿದ್ದಾರೆ.

ಲಂಡನ್ (ಜೂ. 13): ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಆದೇಶಿಸಿದ್ದ ‘ಬ್ಲೂ ಸ್ಟಾರ್‌’ ಕಾರ್ಯಾಚರಣೆಯಲ್ಲಿ ಬ್ರಿಟನ್‌ ಭಾಗಿಯಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಬಹುದು ಎನ್ನಲಾದ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಬ್ರಿಟನ್‌ ನ್ಯಾಯಾಧೀಶರೊಬ್ಬರು ಆದೇಶಿಸಿದ್ದಾರೆ.

ಈ ಮೂಲಕ ಈ ಕುರಿತಾದ ದಾಖಲೆಗಳನ್ನು ಬಹಿರಂಗಗೊಳಿಸಿದಲ್ಲಿ, ಭಾರತ ಮತ್ತು ಬ್ರಿಟನ್‌ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬ ಬ್ರಿಟನ್‌ ಸರ್ಕಾರದ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಅಮೃತಸರದ ಸ್ವರ್ಣಮಂದಿರದಲ್ಲಿ ಅಡಗಿದ್ದ ಸಿಖ್‌ ಉಗ್ರರನ್ನು ತೆರವುಗೊಳಿಸಲು ಈ ಕಾರ್ಯಾಚರಣೆ ನಡೆಸಲಾಗಿತ್ತು.