ನವದೆಹಲಿ(ಆ.04): ಜಮ್ಮು ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಹಾಗೂ ಅಮರನಾಥ್ ಯಾತ್ರಾರ್ಥಿಗಳಿಗೆ ಕಣಿವೆ ತೊರೆಯುವಂತೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಕಾಶ್ಮೀರ ಪ್ರವಾಸ ಕೈಗೊಳ್ಳದಂತೆ ಇಂಗ್ಲೆಂಡ್, ಆಸ್ಟ್ರೆಲೀಯಾ ಹಾಗೂ ಜರ್ಮಿನಿ ಸರ್ಕಾರಗಳು ತಮ್ಮ ನಾಗರಿಕರಿಗೆ ಸೂಚನೆ ನೀಡಿವೆ. 

ಕಾಶ್ಮೀರದಲ್ಲಿ ತೀವ್ರತರವಾದ ಬೆಳವಣಿಗೆಗಳು ಕಂಡು ಬರುತ್ತಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಇಂಗ್ಲೆಂಡ್, ಆಸ್ಟ್ರೆಲೀಯಾ ಹಾಗೂ ಜರ್ಮಿನಿ ಸರ್ಕಾರಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಶ್ಮೀರ ಪ್ರವಾಸವನ್ನು ರದ್ದಗೊಳಿಸುವಂತೆ ಹಾಗೂ ಈಗಾಗಲೇ ರಾಜ್ಯದಲ್ಲಿರುವ ತನ್ನ ನಾಗರಿಕರು ಸ್ಥಳೀಯ ಆಡಳಿತ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಸಿಸುವಂತೆ ಈ ಮೂರು ದೇಶಗಳು ಮನವಿ ಮಾಡಿವೆ.