ಇಂಗ್ಲೆಂಡ್ :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಬ್ರಿಟನ್ ಮೂಲದ ವೈದ್ಯಕೀಯ ಜರ್ನಲ್ ಒಂದು ಪ್ರಶಂಸಿಸಿದೆ. 

ದಿ ಲ್ಯಾನ್ಸೆಟ್ ಎನ್ನುವ ವೈದ್ಯಕೀಯ ಜರ್ನಲ್ ಈ ಬಗ್ಗೆ ಬರೆದಿದ್ದು ಜನರ ಅಗತ್ಯವನ್ನು ಮನಗಂಡು ಸಾಮಾನ್ಯ ಜನರಿಗೂ ಅಗತ್ಯವಿರುವ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಹೇಳಿದೆ. 

ಇಂತಹ ಪ್ರಮುಖ ಯೋಜನೆಯಿಂದ ಕೆಳವರ್ಗದ ಜನತೆ,  ಬುಡಕಟ್ಟು ಸಮುದಾಯ,  ಗ್ರಾಮೀಣ ಪ್ರದೇಶದ ಬಡಜನತೆ ಸೇರಿದಂತೆ ಅನೇಕರಿಗೆ ಈ ಯೋಜನೆ ಅನುಕೂಲಕರವಾದುದಾಗಿದೆ.  ಇನ್ನು ಈ ಯೋಜನೆಯು 2019ರ ಲೋಕಸಭಾ ಚುನಾವಣೆಗೆ ಪ್ರಭಾವ ಬೀರಲಿದೆ ಎಂದು ಅದರಲ್ಲಿ ಹೇಳಲಾಗಿದೆ.  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಅತ್ಯಂತ ಪ್ರಮುಖ ಯೋಜನೆಗಳನ್ನು ಆರಂಭ ಮಾಡಿದ್ದು ಅದರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಪ್ರಮುಖವಾದುದಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.