ಪತ್ರಿಕೆ ಹಾಗೂ ವರದಿಗಾರನ ವಿರುದ್ಧ ಐಟಿ ಕಾಯಿದೆಯ 66ನೆ ಸೆಕ್ಷನ್ ಹಾಗೂ ಆಧಾರ್ ಕಾಯಿದೆಯ 36/37 ಅನ್ವಯ ಐಪಿಸಿ ಸೆಕ್ಷನ್ 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ), 420(ವಂಚನೆ),468(ದಾಖಲೆ ತಿದ್ದುವಿಕೆ) ಹಾಗೂ 471(ದಾಖಲೆಯನ್ನು ನಕಲಿ ಮಾಡಿ ಬಳಸುವುದು)ರಡಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ನವದೆಹಲಿ(ಜ.07): ಆಧಾರ್ ಸಂಖ್ಯೆಗಳು ವಾಟ್ಸ್'ಅಪ್ ಮೂಲಕ ಮಾರಾಟವಾಗುತ್ತಿದೆ ಎಂದು ಇತ್ತೀಚಿಗಷ್ಟೆ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಹಾಗೂ ವರದಿ ಮಾಡಿದ್ದ ಪತ್ರಕರ್ತನ ವಿರುದ್ಧ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಎಫ್'ಐಆರ್ ದಾಖಲಿಸಿದೆ.
ಯುಐಡಿಎಐ'ನ ಉಪ ನಿರ್ದೇಶಕ ಬಿ.ಎಂ. ಪಟ್ನಾಯಕ್ಪತ್ರಿಕೆ ಟ್ರಿಬ್ಯೂನ್ ಹಾಗೂ ವರದಿಗಾರ ರಚ್ನಾ ಕೈರಾ ಹಾಗೂ ಲೇಖನಕ್ಕೆ ಸಹಕರಿಸಿದ ಅನಿಲ್ ಕುಮಾರ್,ಸುನೀಲ್ ಕುಮಾರ್ ಹಾಗೂ ರಾಜ್ ವಿರುದ್ಧ ಎಫ್'ಐಆರ್ ದಾಖಲಿಸಿದ್ದಾರೆ.
ಪತ್ರಿಕೆ ಹಾಗೂ ವರದಿಗಾರನ ವಿರುದ್ಧ ಐಟಿ ಕಾಯಿದೆಯ 66ನೆ ಸೆಕ್ಷನ್ ಹಾಗೂ ಆಧಾರ್ ಕಾಯಿದೆಯ 36/37 ಅನ್ವಯ ಐಪಿಸಿ ಸೆಕ್ಷನ್ 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ), 420(ವಂಚನೆ),468(ದಾಖಲೆ ತಿದ್ದುವಿಕೆ) ಹಾಗೂ 471(ದಾಖಲೆಯನ್ನು ನಕಲಿ ಮಾಡಿ ಬಳಸುವುದು)ರಡಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ದಿ ಟ್ರಿಬ್ಯೂನ್ ಜನವರಿ ಮೂರರಂದು ‘ಪೇಟಿಎಂ ಮೂಲಕ 500 ರು.ನೀಡಿದರೆ ಯಾವುದೇ ಅಡಚಣೆಯಿಲ್ಲದೆ, 10 ನಿಮಿಷದಲ್ಲಿ ಶತಕೋಟಿ ಆಧಾರ್ ಮಾಹಿತಿಲಭ್ಯವಾಗುತ್ತದೆ’ ಎಂದು ವಾಟ್ಸಪ್‌ನಲ್ಲಿ ಅನಾಮಿಕ ಸಂದೇಶವೊಂದು ಬಂದಿತ್ತು. ಇದರಜಾಡನ್ನು ಹಿಡಿದ ನಮ್ಮ ವರದಿಗಾರರು ಪೇಟಿಎಂ ಮೂಲಕ 500 ರು. ಪಾವತಿಸಿದರು. ಇದಾದ ಹತ್ತೇನಿಮಿಷದಲ್ಲಿ ಸಂಬಂಧಿಸಿದಏಜೆಂಟ್ ಒಬ್ಬ ವರದಿಗಾರರಿಗೆ ವೆಬ್‌ಸೈಟ್ ವಿಳಾಸ, ಲಾಗಿನ್ ಐಡಿಮತ್ತು ಪಾಸ್‌ವರ್ಡ್ ನೀಡಿದ.
ಅದರಲ್ಲಿ ನಮಗೆ ಬೇಕಾದ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಆ ಖಾತೆದಾರರ ಸಂಪೂರ್ಣಮಾಹಿತಿಗಳು, ಫೋಟೋ, ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಇ-ಮೇಲ್ ವಿಳಾಸ, ಪಿನ್ಸಂಖ್ಯೆ ಇತ್ಯಾದಿಗಳು ಲಭ್ಯವಾದವು’ ಎಂದು ಎಂದು ಚಂಡೀಗಢಮೂಲದ ‘ದ ಟ್ರಿಬ್ಯೂನ್’ ಪತ್ರಿಕೆ ಗುರುವಾರ ವರದಿ ಮಾಡಿತ್ತು. ‘ಇದಲ್ಲದೆ ಇನ್ನೂ 300 ರು. ಹೆಚ್ಚಿಗೆ ನೀಡಿದಾಗ ಆಏಜೆಂಟ್ ಇನ್ನೊಂದು ಸಾಫ್ಟ್ವೇರ್ ನೀಡಿದ.
ಆ ಸಾಫ್ಟ್'ವೇರ್ ಮೂಲಕ ನಮಗೆ ಬೇಕಾದ ಆಧಾರ್ ಸಂಖ್ಯೆಗಳನ್ನು ನಮೂದು ಮಾಡಿದರೆ, ಆಧಾರ್ಕಾರ್ಡನ್ನು ಮುದ್ರಿಸಿಕೊಳ್ಳಬಹು ದಾಗಿದೆ’ ಎಂದು ವರದಿ ಹೇಳಿತ್ತು.
ವರದಿ ಸಂಚಲನಮೂಡಿಸುತ್ತಿದ್ದಂತೆಯೇ ಕೂಡಲೇ ಸ್ಪಷ್ಟನೆ ನೀಡಿರುವ ಯುಐಡಿಎಐ, ‘ಅಂಥ ಯಾವುದೇ ಘಟನೆಗಳುನಡೆದಿಲ್ಲ. ಆಧಾರ್ ಮಾಹಿತಿ ಸೋರಿಕೆ ವರದಿಗಳು ಸತ್ಯಕ್ಕೆ ದೂರ. ಆಧಾರ್ ನಲ್ಲಿಸಂಗ್ರಹವಾಗಿರುವ ಬಯೋ ಮೆಟ್ರಿಕ್, ಮಾಹಿತಿಗಳು ಸುರಕ್ಷಿತವಾಗಿವೆ ಎಂದು ಹೇಳಿಇದೀಕ ದೂರು ದಾಖಲಿಸಿದೆ.
