ಕಂಪಾಲಾ[ಜೂ.23]: ಉಗಾಂಡಾದ ಮಹಿಳೆಯೊಬ್ಬಳ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಮೊದಲ ಬಾರಿ ಈ ಮಹಿಳೆಗೆ ಶೂ ಧರಿಸಿದ ಆಕೆ, ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ಸದ್ಯ ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಹೌದು ಫ್ಯಾಷನ್ ಗಾಗಿ ಒಂದಾದ ಬಳಿಕ ಮತ್ತೊಂದರಂತೆ ಚಪ್ಪಲಿ ಖರೀದಿಸಿ ಮನೆಯ ಮೂಲೆಯಲ್ಲಿ ಗುಡ್ಡೆ ಬಿದ್ದರೂ, ಹೊಸ ಚಪ್ಪಲಿ ಬೇಕು ಎಂದು ಹಠ ಹಿಡಿಯುವ ಪ್ರತಿಯೊಬ್ಬರೂ ಈ ವಿಡಿಯೋ ನೋಡಲೇಬೇಕು.

ಈ ವಿಡಿಯೋವನ್ನು ಜೂನ್ 15 ರಂದು ರೆಕಾರ್ಡ್ ಮಾಡಲಾಗಿದೆ. ಗೌರಾ ಗ್ರಿಯರ್ ಬ್ರಿವಂಡಿ ಹೆಸರಿನ ಪರ್ಯಟಕನೊಬ್ಬ ಉಗಾಂಡಾದ ನ್ಯಾಷನಲ್ ಪಾರ್ಕ್ ಗೆ ತೆರಳಿದಾಗ ಮಹಿಳೆಯೊಬ್ಬಳು ಸುಡು ಬಿಸಿಲಿದ್ದರೂ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ನೋಡುತ್ತಾರೆ. ಬಳಿಕ ಆಕೆಯ ಬಳಿ ಶೂ ಖರೀದಿಸಲು ಹಣವಿಲ್ಲವೆಂದು ತಿಳಿದ ಆ ಪರ್ಯಟಕ, ತಾನೇ ಒಂದು ಜೊತೆ ಶೂ ಖರೀದಿಸಿ ಆಕೆಗೆ ಗಿಫ್ಟ್ ಆಗಿ ನೀಡುತ್ತಾನೆ. 

ಪರ್ಯಟಕ ನೀಡಿದ ಗಿಫ್ಟ್ ನೋಡಿ ಅಚ್ಚರಿಯಿಂದಲೇ ಅದನ್ನು ಬಿಡಿಸುವ ಆ ಮಹಿಳೆ, ತನಗೊಂದು ಜೊತೆ ಶೂ ಸಿಕ್ಕಿದೆ ಎಂದು ತಿಳಿದಾಗ ಖುಷಿ ತಡೆಯಲಾರದೆ ಕುಣಿದು ಕುಪ್ಪಳಿಸುತ್ತಾಳೆ. ಕೂಡಲೇ ಅದನ್ನು ಧರಿಸಿ ಗಿಫ್ಟ್ ಕೊಟ್ಟ ಆ ಪರ್ಯಟಕನಿಗೆ ಧನ್ಯವಾದ ಎನ್ನುತ್ತಾಳೆ. ಗಿಫ್ಟ್ ಪಡೆದ ಮಹಿಳೆಗೆ ಆ ಒಂದು ಜೊತೆ ಶೂ ಅತ್ಯಮೂಲ್ಯವಾಗಿದ್ದವು.

ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡ ದಾರಿಹೋಕರು

ರಸ್ತೆಯ್ಲಲಿ ನಡೆದಾಡುತ್ತಿದ್ದ ಸಾರ್ವಜನಿಕರೂ ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪರ್ಯಟಕ ಗ್ರಿಯರ್ 'ಮಹಿಳೆ ಇದಕ್ಕೂ ಮೊದಲು ಒಂದು ಬಾರಿಯೂ ಶೂ ಧರಿಸಿರಲಿಲ್ಲ. ಹೀಗಿರುವಾಗ ಆಕೆಗೊಂದು ಜೊತೆ ಶೂ ಗಿಫ್ಟ್ ಕೊಡುವ ಎಂಬ ಯೋಚನೆ ಬಂtu. ಆದರೆ ಅದನ್ನು ಸ್ವೀಕರಿಸಿದ ಬಳಿಕ ಆಕೆ ವ್ಯಕ್ತಪಡಿಸಿದ ಅ ಖುಷಿ ನನ್ನ ಕಣ್ಣುಗಳನ್ನು ತೇವಗೊಳಿಸಿದೆ' ಎಂದಿದ್ದಾರೆ.