ಥಾಣೆಯ ಒಟ್ಟು 131 ವಾರ್ಡ್'ಗಳಿರುವ ಮಹಾನಗರ ಪಾಲಿಕೆಯಲ್ಲಿ ಶಿವಸೇನೆ 67, ಎನ್'ಸಿಪಿ 34 ಹಾಗೂ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತೀಚಿಗೆ ನಡೆದಿದ್ದ ಐವರು ಸ್ಪರ್ಧಿಸಿದ್ದ ಮನೋರಮ ವಾರ್ಡ್'ನಲ್ಲಿ ಮೀನಾಕ್ಷಿ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.
ಮುಂಬೈ(ಮಾ.08):ಕನ್ನಡತಿಯೊಬ್ಬರು ಮಹಾರಾಷ್ಟ್ರದ ಥಾಣೆ ಪುರಸಭೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಉಡುಪಿ ಮೂಲದ ಮೀನಾಕ್ಷಿ ಶಿವಸೇನೆ ಪಕ್ಷದಿಂದ ಥಾಣೆಯ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಥಾಣೆಯ ಮನೋರಮ ನಗರದ ಮಾನ್ವಾಡ ವಾರ್ಡ್'ನಿಂದ ಸತತ 3 ಬಾರಿ ಗೆಲುವು ಸಾಧಿಸಿದ್ದರು.
ಥಾಣೆಯ ಒಟ್ಟು 131 ವಾರ್ಡ್'ಗಳಿರುವ ಮಹಾನಗರ ಪಾಲಿಕೆಯಲ್ಲಿಶಿವಸೇನೆ 67, ಎನ್'ಸಿಪಿ 34 ಹಾಗೂ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತೀಚಿಗೆ ನಡೆದಿದ್ದ ಐವರು ಸ್ಪರ್ಧಿಸಿದ್ದ ಮನೋರಮ ವಾರ್ಡ್'ನಲ್ಲಿ ಮೀನಾಕ್ಷಿ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.
ಉಡುಪಿ ಮೂಲದ ಮೀನಾಕ್ಷಿ ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ವಲಸೆ ಹೋಗಿ ಅಲ್ಲಿನ ಸ್ಥಳೀಯ ರಾಜೇಂದ್ರ ಶಿಂಧೆ ಎಂಬುವವರನ್ನು ವಿವಾಹವಾಗಿದ್ದಾರೆ.
