ಉಡುಪಿ[ಜೂ.20]  ತಲಾಖ್ ಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿಯಮಗಳನ್ನು ಹೇಳಿದ್ದರೂ ಯಾವುದೂ ಸಮರ್ಪಕ ಜಾರಿಯಾದಂತೆ ತೋರುತ್ತಿಲ್ಲ. ಹೌದು ಎಂಬಂತೆ ಉಡುಪಿ ಸಮೀಪದಲ್ಲಿ ನಡೆದ ಘಟನೆ ಮತ್ತಷ್ಟು ಪುಷ್ಠಿ ನೀಡುತ್ತದೆ.

ಈಗಾಗಲೇ ಎರಡು ಮದುವೆಯಾದ ಭೂಪ ಮೂರನೇ ಮದುವೆಗೆ ಮುಂದಾಗಿದ್ದಾನೆ. ಹಾಗಾಗಿ ಪತ್ನಿಗೆ ತಲಾಕ್ ನೀಡುವಂತೆ ಒತ್ತಾಯಿಸಿ ಥಳಿಸಿದ್ದಾನೆ. ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಎಂಬಲ್ಲಿನ ನಿವಾಸಿ ಸೈಯ್ಯದ್ ಪ್ರಕರಣದ ಆರೋಪಿ. ಅಷ್ಟೆ ಅಲ್ಲ ತಲಾಖ್ ಗೆ ಒತ್ತಾಯಿಸಿ ಪತ್ನಿಗೆ ಹಲ್ಲೆಯನ್ನೂ ನಡೆಸಿದ್ದಾನೆ. ಗಂಡನ ದೌರ್ಜನ್ಯದಿಂದ ನರಳಿದ ಮಹಿಳೆ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸಂತ್ರಸ್ತೆಗೆ 10 ವರ್ಷದ ಹಿಂದೆ ಸೈಯ್ಯದ್ ಜಿತೆ ಮದುವೆಯಾಗಿತ್ತು.ಈಗಾಗಲೇ ಎರಡು ಮದುವೆಯಾಗಿರುವ ಸಯ್ಯದ್ ತಲಾಖ್ ಕೊಟ್ಟು ಮೂರನೇ ಮದುವೆಗೆ ಮುಂದಾಗಿದ್ದಾನೆ.ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.ನಾಲ್ಕೈದು ದಿನಗಳಿಂದ ಪತ್ನಿಗೆ ವಿಪರೀತ ಹಿಂಸೆ ನೀಡುತ್ತಿದ್ದು ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಸದ್ಯ ಕುಂದಾಪುರ ಪೊಲೀಸರಿಗೆ ಪತ್ನಿಯಿಂದ ದೂರು ನೀಡಿದ್ದು, ನೊಂದ ಮಹಿಳೆಗೆ ಸಾಂತ್ವಾನ ಕೇಂದ್ರ ನೆರವು ನೀಡಿದೆ.