Asianet Suvarna News Asianet Suvarna News

ನ್ಯೂಜೆರ್ಸಿಯಲ್ಲಿ ಚರ್ಚ್ ಖರೀದಿಸಿ ಕೃಷ್ಣ ದೇಗುಲ ನಿರ್ಮಿಸಿದ ಪುತ್ತಿಗೆ ಶ್ರೀ

ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಚಚ್‌ರ್‍ವೊಂದನ್ನು ಖರೀದಿಸಿ ಕಡೆಗೋಲು ಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದು, ಅದರಲ್ಲಿ ಸಾಲಿಗ್ರಾಮ ಶಿಲೆಯ ಕೃಷ್ಣನ ವಿಗ್ರಹದ ಸ್ಥಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ.

Udupi Seer Purchases Chuch Builds Krishna Temple

ಉಡುಪಿ: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಚಚ್‌ರ್‍ವೊಂದನ್ನು ಖರೀದಿಸಿ ಕಡೆಗೋಲು ಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದು, ಅದರಲ್ಲಿ ಸಾಲಿಗ್ರಾಮ ಶಿಲೆಯ ಕೃಷ್ಣನ ವಿಗ್ರಹದ ಸ್ಥಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ.

ಕ್ರೈಸ್ತ ದೇವಾಲಯವೊಂದು ಸುಂದರ​ವಾದ ಹಿಂದೂ ದೇವಾಲ​ಯವಾಗಿರುವುದು ವಿಶ್ವದಲ್ಲೇ ಇದೇ ಮೊದಲು ಎನ್ನಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ. ಇಲ್ಲಿ ಹೊಸ ಕಟ್ಟಡಗಳನ್ನು ಕಟ್ಟುವುದಕ್ಕೆ ಭೂಮಿಯ ಲಭ್ಯತೆ ಬಹಳ ಕಡಿಮೆ ಇದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಹಳೆಯ ದೊಡ್ಡದಾದ ಕ್ರೈಸ್ತ ದೇವಾಲಯವನ್ನು ಖರೀದಿಸಿ, ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ ಜಾಣ್ಮೆಯಿಂದ ಅದನ್ನೇ ಕೃಷ್ಣನ ದೇವಾಲಯವನ್ನಾಗಿ ಪರಿವರ್ತನೆ ಮಾಡಲಾಗಿದೆ.

ದೇವಾಲಯ ಮತ್ತು ಸುತ್ತಲು ಒಟ್ಟು 4.5 ಎಕರೆ ಭೂಮಿ ಇದ್ದು, 600 ಕಾರುಗಳನ್ನು ಪಾರ್ಕ್ ಮಾಡುವುದಕ್ಕೆ ಅವಕಾಶವಿದೆ. ಬೃಹತ್‌ ದೇವಾಲಯದೊಳಗೆ 1000 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

Follow Us:
Download App:
  • android
  • ios