ನಾಳೆ ಮಧ್ಯರಾತ್ರಿಯಿಂದ ಉಬರ್‌, ಓಲಾ ಚಾಲಕರ ಅನಿರ್ಧಿಷ್ಠಾವಧಿ ಮುಷ್ಕರ

Uber Ola strike Drivers to protest on March 19
Highlights

ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಉಬರ್‌, ಓಲಾ ಚಾಲಕರು ಭಾನುವಾರ ಮಧ್ಯರಾತ್ರಿಯಿಂದ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಉಬರ್‌, ಓಲಾ ಚಾಲಕರು ಭಾನುವಾರ ಮಧ್ಯರಾತ್ರಿಯಿಂದ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಮುಂಬೈ, ನವದೆಹಲಿ, ಹೈದರಾಬಾದ್‌, ಪುಣೆ ಸೇರಿದಂತೆ ಇತರ ಪ್ರಮುಖ ನಗರಗಳಲ್ಲೂ ಮುಷ್ಕರ ನಡೆಯಲಿದೆ. ಓಲಾ ಮತ್ತು ಉಬರ್‌ ತಮ್ಮ ಚಾಲಕರಿಗೆ ದೊಡ್ಡ ಭರವಸೆಗಳನ್ನು ನೀಡಿದ್ದವು. ಆದರೆ ಇಂದು ತಮ್ಮ ವೆಚ್ಚವನ್ನೂ ಭರಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿ ವಾಹನ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ.

ಎರಡೂ ಕಂಪನಿಗಳು ತಮಗೆ ಮಾಸಿಕ 1.5 ಲಕ್ಷ ರು. ಆದಾಯದ ಭರವಸೆ ನೀಡಿದ್ದರು. ಇದನ್ನು ನಂಬಿ ನಾವು ಕನಿಷ್ಠ 5-7 ಲಕ್ಷ ರು. ಬಂಡವಾಳ ಹೂಡಿ ವಾಹನ ಖರೀದಿ ಮಾಡಿದ್ದೆವು. ಆದರೆ ಇದೀಗ ಕಂಪನಿಗಳು ಭರವಸೆ ನೀಡಿದಷ್ಟುಆದಾಯ ನೀಡದ ಕಾರಣ ತಾವು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಚಾಲಕರು ದೂರಿದ್ದಾರೆ.

ಇದೇ ವೇಳೆ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಎಂಎನ್‌ಎಸ್‌ ನಾಯಕ ರಾಜ್‌ ಠಾಕ್ರೆಯವರನ್ನು ಚಾಲಕರು ವಿನಂತಿಸಿದ್ದಾರೆ. ಎಂಎನ್‌ಎಸ್‌ ಮತ್ತು ಮುಂಬೈ ಟ್ಯಾಕ್ಸಿಮೆನ್‌ ಯೂನಿಯನ್‌ ಪ್ರತಿಭಟನೆ ಬೆಂಬಲಿಸಿವೆ.

loader