ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ 2 ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕಾಗಿ ಭಾರತದ ಕಾರ್ಮಿಕನೊಬ್ಬನನ್ನು ಯುಎಇ ಕೋರ್ಟ್ ಗಡೀಪಾರು ಮಾಡಿದೆ. ದುಬೈ ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಭಾರತೀಯನ ಮೇಲೆ ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಮಾವಿನಹಣ್ಣು ಕದ್ದ ಆರೋಪವಿತ್ತು.

ಸೋಮವಾರ ತೀರ್ಪು ನೀಡಿದ ಕೋರ್ಟ್, 5000 ದಿರ್ಹಾಮ್(96,474 ರು.) ದಂಡ ವಿಧಿಸಿ ಗಡೀಪಾರು ಮಾಡಿದೆ. ವಿಶೇಷವೆಂದರೆ ಕದ್ದ ಮಾವಿನ ಹಣ್ಣುಗಳ ಬೆಲೆ ಕೇವಲ 115 ರು. ಮಾತ್ರ. ಮಾವಿನಹಣ್ಣುಗಳನ್ನು ಭಾರತಕ್ಕೆ ಸಾಗಿಸಲಾಗುತ್ತಿತ್ತು. ಬಾಯಾರಿಕೆ ಆಗಿದ್ದಕ್ಕೆ 2 ಮಾವಿನಹಣ್ಣು ಬಾಕ್ಸ್‌ನಿಂದ ತೆಗೆದುಕೊಂಡಿದ್ದಾಗಿ ವಿಚಾರಣೆ ವೇಳೆ ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಹಣ್ಣು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತು.