'ರೈ - ಖಾದರ್ ಭಯೋತ್ಫಾದಕರು' ಹೇಳಿಕೆ ಬಗ್ಗೆ ಖಾದರ್ ಕೊಟ್ಟ ಖಡಕ್ ಪ್ರತಿಕ್ರಿಯೆಯಿದು

First Published 11, Mar 2018, 5:34 PM IST
U T Khader Reaction On BJP Secretary Ravi Kumar Statement
Highlights

ಕೆಲ ಸೀಸನ್'ಗಳಲ್ಲಿ ಕೆಲ ರೋಗಗಳು ಬರುತ್ತವೆ. ಅದೇ ರೀತಿ ಚುನಾವಣಾ ಸೀಸನ್'ನಲ್ಲಿ ಇಂತಹ ರೋಗಗಳು ಬರುತ್ತವೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಖಾದರ್ ಹೇಳಿದ್ದಾರೆ. ಈ ಮೊದಲು ಬಿಜೆಪಿ ಕಾರ್ಯದರ್ಶಿ ರವಿ ಕುಮಾರ್ ಸಚಿವ ರೈ ಹಾಗೂ ಖಾದರ್ ಭಯೋತ್ಫಾದಕರು ಎಂದು ಹೇಳಿಕೆ ನೀಡಿದ್ದರು.

ಮಂಗಳೂರು(ಮಾ.11): ಸಚಿವ ರಮಾನಾಥ್ ರೈ ಹಾಗೂ ಯು.ಟಿ. ಖಾದರ್ 'ಭಯೋತ್ಫಾದಕರು' ಹೇಳಿಕೆಗೆ ಸಚಿವ ಯು.ಟಿ. ಖಾದರ್ ಖಡಕ್ ತಿರುಗೇಟು ನೀಡಿದ್ದಾರೆ.

ಕೆಲ ಸೀಸನ್'ಗಳಲ್ಲಿ ಕೆಲ ರೋಗಗಳು ಬರುತ್ತವೆ. ಅದೇ ರೀತಿ ಚುನಾವಣಾ ಸೀಸನ್'ನಲ್ಲಿ ಇಂತಹ ರೋಗಗಳು ಬರುತ್ತವೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಖಾದರ್ ಹೇಳಿದ್ದಾರೆ. ಈ ಮೊದಲು ಬಿಜೆಪಿ ಕಾರ್ಯದರ್ಶಿ ರವಿ ಕುಮಾರ್ ಸಚಿವ ರೈ ಹಾಗೂ ಖಾದರ್ ಭಯೋತ್ಫಾದಕರು ಎಂದು ಹೇಳಿಕೆ ನೀಡಿದ್ದರು.

ಬಿಜೆಪಿಗರಿಗೆ ದೇಶದ ಬಗ್ಗೆ ಕಾಳಜಿ ಇದ್ರೆ ಪ್ರತ್ಯೇಕತಾವಾದಿಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಲಿ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಜೊತೆ ಕೈಜೋಡಿಸಿ ನಮಗೆ ಬುದ್ದಿಹೇಳಲು ಬರುತ್ತಾರೆ. ಜನರನ್ನು ದಾರಿ ತಪ್ಪಿಸುವ, ಮತೀಯ ಭಾವನೆಗಳನ್ನು ಬಿತ್ತುವ ಕೆಲಸ ಮಾಡಬೇಡಿ ಎಂದು ಕಳಕಳಿ ವ್ಯಕ್ತಪಡಿಸಿದರು.

loader