ಹೈದರಾಬಾದ್‌[ಅ.07]: ತೆಲಂಗಾಣದ ವಿಕರಬಾದ್‌ ಜಿಲ್ಲೆಯ ಸುಲ್ತಾನ್‌ ಪುರ ಎಂಬಲ್ಲಿ ಭಾನುವಾರ ಹೊಲದಲ್ಲಿ ವಿಮಾನ ಪತನಗೊಂಡು, ಇಬ್ಬರು ತರಬೇತಿ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಎಸ್ಪಿ ನಾರಾಯಣ ತಿಳಿಸಿದ್ದಾರೆ.

ಮೃತರನ್ನು ಪ್ರಕಾಶ್‌ ವಿಶಾಲ್‌ ಹಾಗೂ ಅಮನ್‌ಪ್ರೀತ್‌ ಎಂದು ಗುರುತಿಸಲಾಗಿದ್ದು, ಇಬ್ಬರೂ ಹೈದರಾಬಾದ್‌ನ ರಾಜೀವ್‌ಗಾಂಧಿ ವಿಮಾನಯಾನ ಅಕಾಡೆಮಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಹೈದರಾಬಾದ್‌ನ ಬೇಗಂ ಪೇಟ್‌ ವಿಮಾನ ನಿಲ್ದಾಣದಿಂದ 100 ಕಿ.ಮಿ ದೂರದಲ್ಲಿ ದೂರದಲ್ಲಿ ದುರಂತ ಸಂಭವಿಸಿದ್ದು, ಪತನಕ್ಕೆ ನೈಜ ಕಾರಣ ತಿಳಿದು ಬಂದಿಲ್ಲ. ನ.18ರಂದು ಇದೇ ಸಂಸ್ಥೆಯ ತರಬೇತಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿತ್ತು.