ನವದೆಹಲಿ [ಜು.2]:  ದಿಲ್ಲಿ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಇಬ್ಬರು ಮಾಜಿ ಶಾಸಕರು  ಬಿಜೆಪಿ ಸೇರಿದ್ದಾರೆ. 

ತಿಮಾರ್ಪುರ್ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಸುರೇಂದರ್ ಸಿಂಗ್ ಪಾಲ್ ಹಾಗೂ ಬಹುಜನ ಸಮಾಜ ಪಕ್ಷದ ಗೋಕುಲ್ ಪುರಿ ಮಾಜಿ ಶಾಸಕ ಸುರೇಂದರ್ ಕುಮಾರ್ ಕೇಸರಿ ಪಾಳಯ ಸೇರಿದರು. 

ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿನ ಅಭೂತಪೂರ್ವ ವಿಜಯವು ಬಿಜೆಪಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ನಾಯಕರು ವಾಲುತ್ತಿರುವುದಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುವ ಮಂತ್ರವೇ ವಿಶ್ವಾಸದಿಂದ ನಮ್ಮ ಪಕ್ಷದತ್ತ ಬರಲು ಕಾರಣ ಎಂದು ಈ ವೇಳೆ ಮಾತನಾಡಿದ  ತಿವಾರಿ ಹೇಳಿದ್ದಾರೆ. 

ಇನ್ನು ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿರುವುದು  ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ವಿಚಾರ ಎಂದಿದ್ದಾರೆ.