ಬಂಡೀಪುರ ಉದ್ಯಾನವನದಲ್ಲಿ ಸುಟ್ಟ ಸ್ಥಿತಿಯಲ್ಲಿ ಹುಲಿಗಳ ಮೃತದೇಹ ಪತ್ತೆ

First Published 25, Jan 2018, 5:40 PM IST
Two Tigers Dead body found in Bandipura National Park
Highlights

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗೋಪಾಲಸ್ವಾಮಿ ಬೆಟ್ಟ ಅರಣ್ಯವಲಯದ ಹಿರಿಕೆರೆ ಬಳಿ ಸುಟ್ಟ ಸ್ಥಿತಿಯಲ್ಲಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿದೆ.  

ಚಾಮರಾಜನಗರ (ಜ.25): ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗೋಪಾಲಸ್ವಾಮಿ ಬೆಟ್ಟ ಅರಣ್ಯವಲಯದ ಹಿರಿಕೆರೆ ಬಳಿ ಸುಟ್ಟ ಸ್ಥಿತಿಯಲ್ಲಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿದೆ.  

3 ವರ್ಷದ ಗಂಡು ಹುಲಿ, 2 ವರ್ಷದ ಹೆಣ್ಣು ಹುಲಿ ಮೃತದೇಹ ಪತ್ತೆಯಾಗಿದೆ.  ಸ್ಥಳಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಮೃತ ಹುಲಿಗಳ ಅಂಗಾಂಗಗಳ ಪರೀಕ್ಷೆಗಾಗಿ  ಬೆಂಗಳೂರಿಗೆ ರವಾನೆ ಮಾಡಲಾಗಿದೆ.

 

loader