ಗಡಿ ಭಾಗದಲ್ಲಿ ಗಸ್ತು ತಿರುತ್ತಿದ್ದ ಭಾರತೀಯ ಸೇನಾ ತುಕಡಿ ಮೇಲೆ ಪಾಕ್ ಸೇನಾ ಬೆಂಬಲಿತ ಬಾರ್ಡರ್ ಆ್ಯಕ್ಷನ್ ಟೀಮ್'ನ ಸದಸ್ಯರು ದಾಳಿ ಮಾಡಲು ಸಂಚು ರೂಪಿಸುತ್ತಿದ್ದರು. ಈ ವಿಚಾರದ ಮಾಹಿತಿ ಪಡೆದ ಭಾರತೀಯ ಸೇನೆ ಕೂಡಲೇ ಕಾರ್ಯಪ್ರವೃತ್ತರಾಗಿ ಬ್ಯಾಟ್ ತಂಡದ ಮೇಲೆ ತೀವ್ರ ಮಟ್ಟದಲ್ಲಿ ಪ್ರತಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಪಾಕಿಸ್ತಾನೀ ಸೈನಿಕರು ಹತ್ಯೆಯಾಗಿದ್ದಾರೆ.

ಜಮ್ಮು(ಮೇ 26): ಭಾರತೀಯ ಸೇನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿಗೆ ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್(ಬ್ಯಾಟ್)ಗೆ ತಕ್ಕ ಶಾಸ್ತಿಯಾಗಿದೆ. ಕಣಿವೆ ರಾಜ್ಯದ ಉರಿ ಸೆಕ್ಟರ್'ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಸೇನೆ ಇಬ್ಬರು ಪಾಕಿಸ್ತಾನೀ ಸೈನಿಕರ ಸಂಹಾರ ಮಾಡಿದೆ.

ಗಡಿ ಭಾಗದಲ್ಲಿ ಗಸ್ತು ತಿರುತ್ತಿದ್ದ ಭಾರತೀಯ ಸೇನಾ ತುಕಡಿ ಮೇಲೆ ಪಾಕ್ ಸೇನಾ ಬೆಂಬಲಿತ ಬಾರ್ಡರ್ ಆ್ಯಕ್ಷನ್ ಟೀಮ್'ನ ಸದಸ್ಯರು ದಾಳಿ ಮಾಡಲು ಸಂಚು ರೂಪಿಸುತ್ತಿದ್ದರು. ಈ ವಿಚಾರದ ಮಾಹಿತಿ ಪಡೆದ ಭಾರತೀಯ ಸೇನೆ ಕೂಡಲೇ ಕಾರ್ಯಪ್ರವೃತ್ತರಾಗಿ ಬ್ಯಾಟ್ ತಂಡದ ಮೇಲೆ ತೀವ್ರ ಮಟ್ಟದಲ್ಲಿ ಪ್ರತಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಪಾಕಿಸ್ತಾನೀ ಸೈನಿಕರು ಹತ್ಯೆಯಾಗಿದ್ದಾರೆ.

ಇದರೊಂದಿಗೆ, ಮೇ 1ರಂದು ಪಾಕಿಸ್ತಾನದ ಬ್ಯಾಟ್ ತಂಡದ ಕಿರಾತಕರು ಇಬ್ಬರು ಭಾರತೀಯ ಸೈನಿಕರ ತಲೆ ಕತ್ತರಿಸಿದ ಘಟನೆಗೆ ನಮ್ಮ ಸೇನೆ ಸೇಡು ತೀರಿಸಿಸಿಕೊಂಡಂತಾಗಿದೆ.