ಈ ಮೊದಲು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಭಾರತೀಯ ವಾಯುಸೇನೆಯ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅವರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ಉಧ್ಯಮಿ ಗೌತಮ್ ಕೆಹತಾನ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ನವದೆಹಲಿ(ಮಾ.04): ಆಗಸ್ಟ್'ವೆಸ್ಟ್'ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪದಡಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತಬದ್ದ ಜಾಮೀನು ನೀಡಿದೆ.
ದೆಹಲಿ ಮೂಲದ ಮೀಡಿಯಾ ಎಕ್ಸೀಂ ಪ್ರೈ. ಲಿ ಕಂಪನಿಯ ನಿರ್ದೇಶಕ ಆರ್.ಕೆ ನಂದಾ ಮತ್ತು ಮಾಜಿ ನಿರ್ದೇಶಕ ಜೆ.ಬಿ ಸುಬ್ರಮಣಿಯಂಗೆ ತಲಾ ವೈಯುಕ್ತಿಕ ಒಂದು ಲಕ್ಷ ಬಾಂಡ್ ನೀಡಬೇಕೆನ್ನುವ ಷರತ್ತಿನ ಮೇರೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಮೊದಲು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಭಾರತೀಯ ವಾಯುಸೇನೆಯ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅವರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ಉಧ್ಯಮಿ ಗೌತಮ್ ಕೆಹತಾನ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.