ನಿಷೇಧಿತ ಸಂಘಟನೆ ಜತೆ ಸಂಪರ್ಕ ಆರೋಪದ ಮೇರೆಗೆ ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ಇಬ್ಬರು ಸದಸ್ಯರನ್ನು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.

ಶಿಲ್ಲಾಂಗ್: ನಿಷೇಧಿತ ಸಂಘಟನೆ ಜತೆ ಸಂಪರ್ಕ ಆರೋಪದ ಮೇರೆಗೆ ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ಇಬ್ಬರು ಸದಸ್ಯರನ್ನು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.

ನಿಷೇಧಿತ ಹಿನ್ನಿ ಟ್ರೆಪ್ ರಾಷ್ಟ್ರೀಯ ಲಿಬರೇಷನ್ ಕೌನ್ಸಿಲ್(ಎಚ್‌ಎನ್‌ಎಲ್‌ಸಿ) ಮುಖಂಡರ ಭೇಟಿ ಮಾಡಲು ಬಾಂಗ್ಲಾ ದೇಶಕ್ಕೆ ತೆರಳಲು ಮುಂದಾಗಿದ್ದ ನೋಯ್ಡಾದ ಇವರನ್ನು ಪಶ್ಚಿಮದ ಜೈನಂತಿಯಾ ಹಿಲ್ಸ್ ಜಿಲ್ಲೆ ಯಲ್ಲಿ ಮಂಗಳವಾರ ಸೆರೆ ಹಿಡಿಯಲಾಗಿದೆ.

ಬಂಧಿತರು ಸದಸ್ಯರು ವೀಸಾ ಸೇರಿ ಇತರ ದಾಖಲೆ ಹೊಂದಿದ್ದಾರೆ. ಆದರೆ, ನಿಷೇಧಿತ ಎಚ್‌ಎನ್‌ಎಲ್‌ಸಿ ಮುಖಂಡರ ಭೇಟಿ ಮಾಡುವಂತಿಲ್ಲ ಎಂದಿದ್ದಾರೆ ಪೊಲೀಸರು.