ಇಲ್ಲಿನ ಗ್ರಾಸೆ ನಗರದಲ್ಲಿನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಪ್ಯಾರೀಸ್ (ಮಾ.16): ಇಲ್ಲಿನ ಗ್ರಾಸೆ ನಗರದಲ್ಲಿನ ಶಾಲೆಯೊಂದರಲ್ಲಿ ಗುಂಡಿನ ದಾಳ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ.
2 ಗನ್ ಗಳನ್ನು, 2 ಗ್ರೆನೇಡ್ ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಇಬ್ಬರು ವಿದ್ಯಾರ್ಥಿಗಳು ಹೆಡ್ ಮಾಸ್ಟರ್ ಕಡೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡು ತಗುಲಿ ಹೆಡ್ ಮಾಸ್ಟರ್ ಗಾಯಗೊಂಡಿದ್ದಾರೆ. ಶಂಕಿತರು ಉಗ್ರಗಾಮಿಗಳಲ್ಲ ಎಂದು ತಿಳಿದು ಬಂದಿದೆ.
ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
