ಏಪ್ರಿಲ್'ನಿಂದೀಚೆ ಪಾಕಿಸ್ತಾನವು ಗಡಿ ನಿಯಮವನ್ನು ಮುರಿಯುತ್ತಿರುವುದು ಇದು 7ನೇ ಬಾರಿಯಾಗಿದೆ.

ಜಮ್ಮು(ಮೇ 01): ಪಾಕಿಸ್ತಾನ ಮತ್ತೊಮ್ಮೆ ಕದನವಿರಾಮ ಉಲ್ಲಂಘಿಸಿದೆ. ಕಣಿವೆ ರಾಜ್ಯದ ಪೂಂಚ್ ಸೆಕ್ಟರ್'ನಲ್ಲಿ ಭಾರತದ ಗಡಿಭಾಗದೊಳಗೆ ಪಾಕಿಸ್ತಾನ ರಾಕೆಟ್ ದಾಳಿ ನಡೆಸಿದೆ. ಇದರಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಇಬ್ಬರು ಭಾರತೀಯ ಯೋಧರು ಬಲಿಯಾಗಿದ್ದಾರೆ. ಭಾರತೀಯ ಸೇನೆಯ ಕಿರಿಯ ಅಧಿಕಾರಿ ಹಾಗೂ ಒಬ್ಬ ಬಿಎಸ್'ಎಫ್ ಕಾನ್ಸ್'ಟೆಬಲ್ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಬಿಎಸ್ಸೆಫ್ ಯೋಧ ಗಾಯಗೊಂಡಿದ್ದಾರೆ.

ಸೋಮವಾರ ಬೆಳಗ್ಗೆ 8:30ರ ಸಮಯದಲ್ಲಿ ಪೂಂಚ್ ಜಿಲ್ಲೆಯ ಕೃಷ್ಣಗತಿ ಸೆಕ್ಟರ್'ನಲ್ಲಿನ ಗಡಿನಿಯಂತ್ರಣ ರೇಖೆಯ ಸಮೀಪವಿರುವ ಬಿಎಸ್'ಎಫ್ ಪೋಸ್ಟ್'ಗಳ ಮೇಲೆ ಪಾಕಿಸ್ತಾನದ ಸೇನೆಯು ತೀವ್ರ ಮಟ್ಟದಲ್ಲಿ ದಾಳಿ ನಡೆಸಿತು. ಭಾರತೀಯ ಯೋಧರೂ ಕೂಡ ಪ್ರತಿದಾಳಿ ನಡೆಸಿದರು ಎಂದು ಸ್ಥಳದಲ್ಲಿದ್ದ ಹಿರಿಯ ಬಿಎಸ್'ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏಪ್ರಿಲ್'ನಿಂದೀಚೆ ಪಾಕಿಸ್ತಾನವು ಗಡಿ ನಿಯಮವನ್ನು ಮುರಿಯುತ್ತಿರುವುದು ಇದು 7ನೇ ಬಾರಿಯಾಗಿದೆ.