ಜಮೀನು ಮಾಲೀಕ ಶಂಕರಪ್ಪ(30), ಮೇಸ್ತ್ರಿ ಬಸವರಾಜು(33) ಮೃತರು. 30 ಅಡಿ ಆಳದಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬರೂ ಮೃತಪಟ್ಟಿದ್ದರು.
ರೋಣ(ಏ.12): ಕೊಳವೆ ಬಾವಿಯ ಮಣ್ಣಿನಡಿ ಸಿಲುಕಿದ್ದ ಇಬ್ಬರು ಯುವಕರು ಮೃತಪಟ್ಟಿದ್ದು, ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.
ಜಮೀನು ಮಾಲೀಕ ಶಂಕರಪ್ಪ(30), ಮೇಸ್ತ್ರಿ ಬಸವರಾಜು(33) ಮೃತರು. 30 ಅಡಿ ಆಳದಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬರೂ ಮೃತಪಟ್ಟಿದ್ದರು. ಗದಗ ಜಿಲ್ಲೆ ರೋಣ ತಾ. ಸವಡಿ ಗ್ರಾಮದಲ್ಲಿ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿತ್ತು. ರೀ ಬೋರ್ ಮಾಡುವಾಗ ಮಣ್ಣು ಕುಸಿದು ಕೊಳವೆ ಬಾವಿಗೆ ಇಬ್ಬರು ಬಿದ್ದಿದ್ದರು. ಹಿಟಾಚಿ ಮೂಲಕ ಕಾರ್ಯಾಚರಣೆ ಮಾಡಲಾಗಿತ್ತು.
