ಕೊಟ್ಟಾಯಮ್ :  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,  ವಿವಿಧ ಪಕ್ಷಗಳು ಸಕಲ ಸಿದ್ದತೆಯಲ್ಲಿ ತೊಡಗಿವೆ. 

ಇತ್ತ ಕೇರಳದಲ್ಲಿ ಅಚ್ಚರಿದಾಯಕ ಬೆಳವಣಿಗೆಯೊಂದರಲ್ಲಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳಿಬ್ಬರು  ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಾಕೋಬ್ ಸಿರಿಯನ್ ಚರ್ಚ್ನ  ಗೀವರ್ಗೀಸ್, ಥಾಮಸ್ ಕುಲತುಂಕಲ್ ಬಿಜೆಪಿ ಸೇರಿದ್ದಾರೆ. 

ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಲ್ಲೈ  ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ. ಬಿಶಪ್ ಥಾಮಸ್  ಮೋರ್ ಅವರು ಪಕ್ಷವನ್ನು ಸೇರ್ಪಡೆಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ರಾಜಕೀಯದತ್ತ ಮುಖ ಮಾಡಿದ್ದಾಗಿ ಹೇಳಿದ್ದಾರೆ.

ಇದೊಂದು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪ್ರೀಸ್ಟ್ ಗಳು ಹೇಳಿದ್ದಾರೆ. ಈ ಹೇಳಿಕೆ ಇದೀಗ ಇನ್ನಷ್ಟು ಕುತೂಹಲವನ್ನು ಸೃಷ್ಟಿ ಮಾಡಿದೆ.