ವಿಜಯದಶಮಿಯ ಆಯುಧಪೂಜೆಯ ಸಂದರ್ಭ | ಮೋಜಿಗಾಗಿ ಗುಂಡು | ಇಬ್ಬರು ಭಜರಂಗ ದಳದ ಕಾರ್ಯಕರ್ತರ ಬಂಧನ

ಮೊರಾದಬಾದ್, ಉತ್ತರ ಪ್ರದೇಶ (ಅ.11): ವಿಜಯದಶಮಿಯ ಆಯುಧಪೂಜೆಯ ಸಂದರ್ಭದಲ್ಲಿ ಮೋಜಿಗಾಗಿ ಗುಂಡು ಹಾರಿಸಿದ ಇಬ್ಬರು ಭಜರಂಗ ದಳದ ಕಾರ್ಯಕರ್ತರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಬಾದ್’ನಲ್ಲಿ ನಡೆದಿದೆ.

ಗುಂಡು ಹಾರಿಸಿದ ಬಳಿಕ ಇಬ್ಬರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು.