ಜೆಎನ್’ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಬಗ್ಗೆ ಅಸಭ್ಯವಾಗಿ ಟ್ವೀಟಿಸಿರುವ ಹಿನ್ನೆಲೆಯಲ್ಲಿ ಖ್ಯಾತ ಗಾಯಕ ಅಭಿಶೇಕ್ ಭಟ್ಟಾಚಾರ್ಯ ಅವರ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.
ಜೆಎನ್’ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಬಗ್ಗೆ ಅಸಭ್ಯವಾಗಿ ಟ್ವೀಟಿಸಿರುವ ಹಿನ್ನೆಲೆಯಲ್ಲಿ ಖ್ಯಾತ ಗಾಯಕ ಅಭಿಶೇಕ್ ಭಟ್ಟಾಚಾರ್ಯ ಅವರ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.
ಬಂಗಾಳದಿಂದ ಗುಜರಾತ್’ವರೆಗೆ ಬಿಜೆಪಿ ನಾಯಕರು ಸೆಕ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮಾಧ್ಯಮ ವರದಿಯನ್ನು ಶೆಹ್ಲಾ ರಶೀದ್ ಟ್ವೀಟಿಸಿದ್ದರು. ಅದಕ್ಕೆ ಪ್ರತಿಯಾಗಿ ಅಭಿಶೇಕ್ ಆಕೆಯ ಬಗ್ಗೆ ಅಶ್ಲೀಲವಾಗಿ ಟ್ವೀಟಿಸಿದ್ದರು.
ಮಹಿಳೆಯೊಬ್ಬಳ ಬಗ್ಗೆ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸಿದ್ದಾರೆಂದು ಅಭಿಜಿತ್ ವಿರುದ್ಧ ಟ್ವಿಟರಟ್ಟಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.