ಕಡಿಮೆ ಮಿತಿ ಇರುವುದರಿಂದ ಟ್ವಿಟರ್ ಬಳಕೆದಾರರು ಸಾಕಷ್ಟು ಬಾರಿ ತಾವು ಅಂದುಕೊಂಡಿದ್ದಷ್ಟನ್ನು ಬರೆಯಲಾಗದೆ ತೊಂದರೆ ಅನುಭವಿಸುತ್ತಿದ್ದರು.

ಸ್ಯಾನ್‌ಫ್ರಾನ್ಸಿಸ್ಕೋ(ಸೆ.27): ಗೂಗಲ್ ನಂತರ ವಿಶ್ವದಲ್ಲಿ ವೇಗವಾಗಿ ಆಕರ್ಷಿಸುತ್ತಿರುವ ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಕೆಲವೇ ದಿನಗಳಲ್ಲಿ ತನ್ನ ಪದಬಳಕೆಯ ಮಿತಿಯನ್ನು 140ರಿಂದ 280ಕ್ಕೆ ಏರಿಸಲಿದೆ.

ಕಡಿಮೆ ಮಿತಿ ಇರುವುದರಿಂದ ಟ್ವಿಟರ್ ಬಳಕೆದಾರರು ಸಾಕಷ್ಟು ಬಾರಿ ತಾವು ಅಂದುಕೊಂಡಿದ್ದಷ್ಟನ್ನು ಬರೆಯಲಾಗದೆ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸಂಸ್ಥೆಗೆ ಆಕ್ಷೆಪಣೆ ಕೂಡ ಸಲ್ಲಿಸಲಾಗಿತ್ತು. ಈ ಕಾರಣದಿಂದ ಸಂಸ್ಥೆ ಪದ ಬಳಕೆಯನ್ನು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ.